Saturday, August 13, 2022

Latest Posts

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಟಿ ಕಾಜಲ್​ ಅಗರ್​ವಾಲ್ !

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಳೆದ ವರ್ಷ ಅಕ್ಟೋಬರ್​ ತಿಂಗಳಲ್ಲಿ ನಟಿ ಕಾಜಲ್​ ಅಗರ್​ವಾಲ್ ಗೌತಮ್​ ಅವರನ್ನು ಮದುವೆ ಆಗುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.ಇದರ ನಡುವೆ ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್​ ನ್ಯೂಸ್​ ಸಿಕ್ಕಿದೆ. ಕಾಜಲ್​ ಪ್ರೆಗ್ನೆಂಟ್​ ಎನ್ನುವ ವಿಚಾರ ಜೋರಾಗಿ ಚರ್ಚೆ ಆಗುತ್ತಿದೆ.
ಕಾಜಲ್ ಅಗರ್​ವಾಲ್​ ಅವರು ಅಕ್ಕಿನೇನಿ ನಾಗಾರ್ಜುನ ನಟನೆಯ ‘ಘೋಸ್ಟ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್​ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ತೆಲುಗು ಬಿಗ್​ ಬಾಸ್​ ಸೀಸನ್​ 5ರ ನಿರೂಪಣೆಯಲ್ಲಿ ಬ್ಯುಸಿ ಇರುವ ನಾಗಾರ್ಜುನ ಶೀಘ್ರವೇ ಈ ಸಿನಿಮಾದ ಸೆಟ್​ ಸೇರಿಕೊಳ್ಳುತ್ತಿದ್ದಾರೆ. ಆದರೆ, ಈ ಸಿನಿಮಾದಿಂದ ಹೊರ ನಡೆಯಲು ಕಾಜಲ್​ ನಿರ್ಧರಿಸಿದ್ದಾರೆ. ಗರ್ಭಿಣಿ ಆದ ನಂತರ ಶೂಟಿಂಗ್​ ಪೂರ್ಣಗೊಳಿಸೋದು ಕಷ್ಟ. ಈ ಕಾರಣಕ್ಕೆ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇನ್ನು, ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾದಲ್ಲಿಯೂ ಕಾಜಲ್​ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್​ ಪೂರ್ಣಗೊಂಡಿದ್ದು, ಪ್ಯಾಚ್​ವರ್ಕ್​ ಕೆಲಸಗಳು ಬಾಕಿ ಇವೆ. ಇದನ್ನು ಕಾಜಲ್​ ಶೀಘ್ರವೇ ಪೂರ್ಣಗೊಳಿಸಲಿದ್ದಾರೆ. ನಂತರ ಅವರು ವಿಶ್ರಾಂತಿ ಪಡೆಯಲಿದ್ದಾರೆ.
ಇನ್ನು, ಅವರು ಒಪ್ಪಿಕೊಂಡಿರುವ ಬಹುತೇಕ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ. ‘ಇಂಡಿಯನ್ 2’ ಸಿನಿಮಾದಲ್ಲಿಯೂ ಕಾಜಲ್​ ಅಗರ್​ವಾಲ್​ ನಟಿಸುತ್ತಿದ್ದಾರೆ. ಕಮಲ್​ ಹಾಸನ್​ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕೆಲಸಗಳು ಸೆಟ್ಟೇರುವುದು ವಿಳಂಬವಾಗುತ್ತಲೇ ಇದೆ.
ಕೆಲ ತಿಂಗಳ ಹಿಂದೆ ಮಾಧ್ಯಮಗಳ ಜತೆ ಮಾತನಾಡಿದ್ದ ಕಾಜಲ್​, ‘ನನ್ನ ಪತಿ ಚಿತ್ರರಂಗ ತೊರೆಯಲು ಹೇಳಿದರೆ ನಾನು ಹಾಗೆಯೇ ಮಾಡುತ್ತೇನೆ. ನಾನು ಇಂದು ಈ ಸ್ಥಾನದಲ್ಲಿ ಇರುವುದಕ್ಕೆ ಕಾರಣ ನನ್ನ ಪತಿ ಹಾಗೂ ನನ್ನ ಕುಟುಂಬ. ನಾನು ನನ್ನ ಪತಿಯ ಅನುಮತಿ ಪಡೆದೇ ನಟನೆ ಮುಂದುವರಿಸುತ್ತಿದ್ದೇನೆ ಎಂದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss