ಹೋಟೆಲ್ ಮಾಲಕರಿಗೆ ಗುಡ್ ನ್ಯೂಸ್: ಮಧ್ಯರಾತ್ರಿ 1 ಗಂಟೆವರೆಗೆ ಓಪನ್​ ಮಾಡಲು ಸಿಕ್ಕಿತು ಗ್ರೀನ್ ಸಿಗ್ನಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಧ್ಯರಾತ್ರಿ 1 ಗಂಟೆವರೆಗೆ ಹೋಟೆಲ್​ಗಳನ್ನು ತೆರೆಯಲು ಅನುಮತಿ ನೀಡಿ ನಗರ ಪೊಲೀಸ್​ ಆಯುಕ್ತ ಪ್ರತಾಪ್​ ರೆಡ್ಡಿ ಆದೇಶ ಹೊರಡಿಸಿದ್ದಾರೆ.

1 ಗಂಟೆವರೆಗೆ ವ್ಯಾಪಾರ ನಡೆಸಲು ಅನುಮತಿ ಇದ್ದರೂ, ಪೊಲೀಸರು ರಾತ್ರಿ 10 ಗಂಟೆಗೆಲ್ಲ ಹೋಟೆಲ್​ಗಳನ್ನು ಬಂದ್​ ಮಾಡಿಸುತ್ತಿದ್ದರು.

ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ ತಿನಿಸುಗಳನ್ನು ಒದಗಿಸುವ ಸ್ಥಳಗಳ ವ್ಯಾಪಾರದ ಅವಧಿಯನ್ನು ಬೆಳಗ್ಗೆ 6 ರಿಂದ ರಾತ್ರಿ 1 ಗಂಟೆವರೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಪ್ರತಾಪ್​ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಈ ವಿಚಾರವನ್ನು ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಗೆ ತಿಳಿಸಿ ಹೋಟೆಲ್​ಗಳಿಗೆ ತೊಂದರೆ ನೀಡದಂತೆ ನೋಡಿಕೊಳ್ಳುವಂತೆ ಡಿಸಿಪಿಗಳಿಗೆ ಆಯುಕ್ತರು ಸೂಚಿಸಿದ್ದಾರೆ.

ಇತ್ತೀಚಿಗೆ ಪೊಲೀಸರು, ರಾತ್ರಿ 10 ಗಂಟೆ ಬಳಿಕ ಹೋಟೆಲ್​ಗಳನ್ನು ಬಂದ್​ ಮಾಡಿಸುತ್ತಿದ್ದರು. ಇದರಿಂದ ಹೋಟೆಲ್​ಗಳಿಗೆ ನಷ್ಟ ಉಂಟಾಗಿತ್ತು. ಇನ್ನು ಕೊರೋನಾ ಸೋಂಕು ಬಳಿಕ ಹೋಟೆಲ್​ಗಳಿಗೆ ಪೊಲೀಸರು ನಿರ್ಬಂಧ ಹೆಚ್ಚಾಯಿತು.

ಬಳಿಕ ಹೋಟೆಲ್​ ಮಾಲೀಕರ ಸಂಘವು, ಇತ್ತೀಚಿಗೆ ನಗರ ಪೊಲೀಸ್​ ಆಯುಕ್ತ ಸಿ.ಎಚ್​ಪ್ರತಾಪ್​ ರೆಡ್ಡಿ ಅವರನ್ನು ಭೇಟಿಯಾಗಿ 2016ರ ಆದೇಶದಂತೆ ರಾತ್ರಿ 1 ಗಂಟೆವರೆಗೆ ವಹಿವಾಟು ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಆಯುಕ್ತರು, ಹೋಟೆಲ್​ಗಳನ್ನು ಅವಧಿ ಮುಂಚೆ ಬಂದ್​ ಮಾಡದಂತೆ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!