ಜಿಯೋ ಗ್ರಾಹಕರಿಗೆ ಗುಡ್‌ ನ್ಯೂಸ್:‌ ಹೊಸ ಫ್ಯಾಮಿಲಿ ಪೋಸ್ಟ್‌ಪೇಯ್ಡ್‌ ಯೋಜನೆ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದ ಅತಿ ದೊಡ್ಡ ಟೆಲಿಕಾಂ ಆಪರೇಟರ್‌ ಎಂದೆನಿಸಿರುವ ಮುಖೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ತನ್ನ ಗ್ರಾಹಕರಿಗೆ ಗುಡ್‌ ನ್ಯೂಸ್‌ ನೀಡಿದ್ದು ಜಿಯೋ ಪ್ಲಸ್‌ ಹೆಸರಿನಲ್ಲಿ ಹೊಸ ಪೋಸ್ಡ್‌ ಪೇಯ್ಡ್‌ ಯೋಜನೆಗಳನ್ನು ಆರಂಭಿಸಿದೆ. ಕಡಿಮೆ ವೆಚ್ಚದಲ್ಲಿ ಕುಟುಂಬದ ಸದಸ್ಯರನ್ನೂ ಒಳಗೊಳ್ಳುವ ಫ್ಯಾಮಿಲಿ ಪ್ಲಾನ್‌ ಅನ್ನು ಜಿಯೋ ಘೋಷಿಸಿದ್ದು ನಾಲ್ಕು ಜನ ಕುಟುಂಬ ಸದಸ್ಯರಿಗೆ ಅನುಕೂಲವಾಗುವಂತೆ ಕೇವಲ 696 ರೂ.ಗಳಿಗೆ ಯೋಜನೆ ಜಾರಿಗೆ ತಂದಿದೆ.

ಈ ಯೋಜನೆ ಆಯ್ದಕೊಳ್ಳುವವರಿಗೆ ಮೊದಲು ತಿಂಗಳು ಉಚಿತವಾಗಿರಲಿದ್ದು 399 ರೂ. ಪಾವತಿಸಿ ಜಿಯೋ ಪ್ಲಸ್‌ ಚಂದಾದಾರರಾಗಬಹುದಾಗಿದೆ. ಹೀಗೆ ಪಾವತಿಸಿ ಜಿಯೋ ಪ್ಲಸ್‌ ಯೋಜನೆ ಆಯ್ದುಕೊಳ್ಳುವವರು ತಮ್ಮ ಕುಟುಂಬದ ಸದಸ್ಯರಿಗೆ ಒಬ್ಬರಿಗೆ 99 ರೂ. ಪಾವತಿಸಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದ್ದು ಚಂದಾದರನನ್ನು ಹೊರತುಪಡಿಸಿ 696ರೂ.ಗಳಿಗೆ ಒಟ್ಟೂ 3 ಜನ ಇತರ ಕುಟುಂಬ ಸದಸ್ಯರನ್ನು ಒಳಗೊಳ್ಳಬಹುದಾಗಿದೆ. ಅಂದರೆ ಒಬ್ಬ ಸದಸ್ಯನಿಗೆ ಸರಾಸರಿ 174 ರೂ.ವೆಚ್ಚ ತಗುಲಲಿದೆ. ಈ ಯೋಜನೆಯಲ್ಲಿ 75 ಜಿಬಿ ಡೇಟಾ ಲಭ್ಯವಿರಲಿದ್ದು ಹೆಚ್ಚಿನ ಡೇಟಾ ಬಳಕೆಯನ್ನು ಹೊಂದಿರುವ ಗ್ರಾಹಕರು ತಿಂಗಳಿಗೆ 100 ಜಿಬಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು ಮೊದಲ ಸಂಪರ್ಕಕ್ಕೆ ರೂ. 699 ಮತ್ತು ಹೆಚ್ಚುವರಿ ಸಂಪರ್ಕಕ್ಕೆ ರೂ. 99 ಪಾವತಿಸಬೇಕಾಗುತ್ತದೆ. ಒಟ್ಟು 3 ಹೆಚ್ಚುವರಿ ಸಂಪರ್ಕಗಳನ್ನು ಮಾತ್ರ ತೆಗೆದುಕೊಳ್ಳಬಹುದಾಗಿದೆ. ಕೆಲವು ವೈಯಕ್ತಿಕ ಯೋಜನೆಗಳನ್ನು ಸಹ ಪ್ರಾರಂಭಿಸಲಾಗಿದ್ದು 299 ರೂಪಾಯಿಗೆ 30 ಜಿಬಿ ಪ್ಲಾನ್ ಹಾಗೆಯೇ 599 ರೂ.ಗೆ ಅನಿಯಮಿತ ಡೇಟಾ ಪ್ಲಾನ್‌ ಸಹ ಲಭ್ಯವಿದೆ ಎಂದು ಜಿಯೋ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಮಾತನಾಡಿದ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿ, “ಜಿಯೋಪ್ಲಸ್ ಅನ್ನು ಪ್ರಾರಂಭಿಸುವ ಉದ್ದೇಶವು ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಹೊಸ ಪ್ರಯೋಜನಗಳು ಮತ್ತು ಅನುಭವಗಳನ್ನು ನೀಡುವುದಾಗಿದೆ. ಜಿಯೋ 331 ನಗರಗಳಲ್ಲಿ ಟ್ರೂ 5ಜಿ ಅನ್ನು ಪ್ರಾರಂಭಿಸುವ ಮೂಲಕ ತನ್ನ ನೆಟ್ ವರ್ಕ್ ಅನ್ನು ಮತ್ತಷ್ಟು ಬಲಪಡಿಸಿದೆ. ತಮ್ಮ ನೆಟ್ವರ್ಕ್‌ ಆಪರೇಟರ್‌ಗಳನ್ನು ಬದಲಾಯಿಸಲು ಯೋಚಿಸುತ್ತಿರುವವರಿಗೆ ಇದು ಉತ್ತಮ ಯೋಜನೆಯಾಗಿದೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!