ಉಳಿತಾಯದಾರರಿಗೆ ಗುಡ್‌ ನ್ಯೂಸ್‌: ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಹೆಚ್ಚಿಸಿದೆ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜನವರಿ-ಮಾರ್ಚ್ 2023 ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಸರ್ಕಾರ ಶುಕ್ರವಾರ ಪರಿಷ್ಕರಿಸಿದೆ. ಜನವರಿ 1 ರಿಂದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC), ಅಂಚೆ ಕಛೇರಿಯ ಅವಧಿ ಠೇವಣಿ, ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಸೆಪ್ಟೆಂಬರ್ 2022 ರಿಂದ ಇದು ಎರಡನೇ ಹೆಚ್ಚಳವಾಗಿದೆ. ಕಿಸಾನ್ ವಿಕಾಸ್ ಪತ್ರ (ಕೆವಿಪಿ), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಖಾತೆ ಯೋಜನೆ ಮತ್ತು ಎರಡು ಮತ್ತು ಮೂರು ವರ್ಷಗಳ ಕಾಲ ಠೇವಣಿಗಳಿಗೆ ಬಡ್ಡಿದರಗಳನ್ನು 10-30 ಬೇಸಿಸ್ ಪಾಯಿಂಟ್‌ಗಳ ವ್ಯಾಪ್ತಿಯಲ್ಲಿ ಹೆಚ್ಚಿಸಲಾಗಿದೆ.

ಆದರೆ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮತ್ತು ಹೆಣ್ಣು ಮಕ್ಕಳ ಉಳಿತಾಯ ಯೋಜನೆ ಸುಕನ್ಯಾ ಸಮೃದ್ಧಿ ಮೇಲಿನ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆಯನ್ನು ಸರ್ಕಾರ ಮಾಡಿಲ್ಲ.

ಸರ್ಕಾರವು ಪರಿಷ್ಕರಿಸಿದ  ಬಡ್ಡಿದರ ಗಳ ವಿವರ ಹೀಗಿದೆ 1ವರ್ಷದ ಪೋಸ್ಟ್ ಆಫೀಸ್ ಸಮಯದ ಠೇವಣಿಗಳ 6.5 ಶೇಕಡಾ, 2ವರ್ಷದ ಪೋಸ್ಟ್ ಆಫೀಸ್ ಸಮಯದ ಠೇವಣಿಗಳ ಮೇಲೆ 6.8 ಶೇಕಡಾ, 3ವರ್ಷದ ಪೋಸ್ಟ್ ಆಫೀಸ್ ಸಮಯದ ಠೇವಣಿಗಳ ಮೇಲೆ 6.9 ಶೇಕಡಾ, 5ವರ್ಷದ ಪೋಸ್ಟ್ ಆಫೀಸ್ ಸಮಯದ ಠೇವಣಿಗಳ ಮೇಲೆ 7.0 ಶೇಕಡಾ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳ(NSC) ಮೇಲೆ 7.0 ಶೇಕಡಾ, ಕಿಸಾನ್ ವಿಕಾಸ್ ಪತ್ರಗಳ ಮೇಲೆ 7.2 ಶೇಕಡಾ, ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆ ಮೇಲೆ 8.0 ಶೇಕಡಾ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!