ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್: ತಿರುಪತಿ ತಿಮ್ಮಪ್ಪನ ಉಚಿತ ದರುಶನ ಟಿಕೆಟ್ ಆನ್‌ಲೈನ್ ನಲ್ಲಿ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ -TTD) ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ನೂತನ ಸೌಲಭ್ಯ ನೀಡಿದ್ದು, ನವೆಂಬರ್ ತಿಂಗಳ ಆನ್‌ಲೈನ್ ದರ್ಶನ ಟಿಕೆಟ್‌ಗಳನ್ನು ಅಕ್ಟೋಬರ್ 26 ರಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಶ್ರೀ ವೇಂಕಟೇಶ್ವರನ ಭಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಟಿಟಿಡಿ ತಿಳಿಸಿದೆ.

ವಿಶೇಷ ದರ್ಶನ ಟಿಕೆಟ್ (ರೂ. 300), ತಿರುಮಲ ವಸತಿ ಡಿಸೆಂಬರ್ ಕೋಟಾವನ್ನು ಈ ತಿಂಗಳ 26 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಮೂಲತಃ ಈ ಟಿಕೆಟ್‌ಗಳನ್ನು ಅಕ್ಟೋಬರ್ 27 ರಂದು ಬಿಡುಗಡೆ ಮಾಡಬೇಕಿತ್ತು. ಆದರೆ ಭಕ್ತರ ಅನುಕೂಲಕ್ಕಾಗಿ ಒಂದು ದಿನ ಮುಂಚಿತವಾಗಿ ಬಿಡುಗಡೆ ಮಾಡಲಾಗುತ್ತಿದೆ.

ಹಿರಿಯ ನಾಗರಿಕರು ಮತ್ತು ಅಂಗವಿಕಲರು ತಿಮ್ಮಪ್ಪನ ದರ್ಶನಕ್ಕೆ ಬುಕ್ ಮಾಡುವುದು ಹೇಗೆ..?

* ಟಿಕೆಟ್ ಅನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬೇಕು.

* ವಯೋಮಿತಿ 65 ವರ್ಷಕ್ಕಿಂತ ಹೆಚ್ಚಿಗೆ ಇರಬೇಕು.

* ಗುರುತಿನ ಪುರಾವೆಗಾಗಿ ಆಧಾರ್ ಕಾರ್ಡ್ ಕಾಪಿ ಒದಗಿಸಬೇಕು.

* ಉಚಿತ ದರ್ಶನ ಟಿಕೆಟ್

* ಹಿರಿಯ ನಾಗರಿಕರ ಜೊತೆಗಿರಲು ಒಬ್ಬ ವ್ಯಕ್ತಿಗೆ ಅನುಮತಿಯಿದೆ.

* ಜೊತೆಗಾರರಾಗಿ ಸಂಗಾತಿಗೆ ಮಾತ್ರವೇ ಅನುಮತಿ ಇದೆ

* 80 ವರ್ಷ ಮೇಲ್ಪಟ್ಟವರ ಸಹಾಯಕರಿಗೂ (ಜೊತೆಗಾರ) ಅನುಮತಿ ನೀಡಲಾಗುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!