ಸಣ್ಣ ಮಳಿಗೆಗಳಿಗೆ ಗುಡ್ ನ್ಯೂಸ್: ಕಡಿಮೆ ಪ್ರಮಾಣದ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸುವುದಿಲ್ಲ ಎಂದ ಕೇರಳ ಸಿಎಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಕೇರಳ ಸಿಎಂ ಪಿಣರಾಯಿ ವಿಜಯನ್ ಸರ್ಕಾರದ ಕುಟುಂಬ ಶ್ರೀ ಮತ್ತು ಸಣ್ಣ ಮಳಿಗೆಗಳು ಮಾರಾಟ ಮಾಡುವ ಕಡಿಮೆ ಪ್ರಮಾಣದ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಹಾಲಿನ ಮತ್ತು ಪ್ಯಾಕೇಜ್ಡ್ ದಿನಸಿ ವಸ್ತುಗಳ ಮೇಲಿನ ಜಿಎಸ್ ಟಿ ಹೇರಿಕೆಯನ್ನು ನೇರವಾಗಿಯೇ ವಿರೋಧಿಸಿರುವ ಕೇರಳ ಸರ್ಕಾರ ಇದೀಗ ಸರ್ಕಾರದ ಕುಟುಂಬ ಶ್ರೀ ಮತ್ತು ಸಣ್ಣ ಮಳಿಗೆಗಳು ಮಾರಾಟ ಮಾಡುವ ಕಡಿಮೆ ಪ್ರಮಾಣದ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಅಲ್ಲದೆ ಇದು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೇರಳ ತೆಗೆದುಕೊಂಡ ನಿಲುವಾಗಿದ್ದು, ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ತಗ್ಗಿಸುವಂತೆ ಕೇಂದ್ರ ಸರ್ಕಾರಕ್ಕೆ ಕೇರಳ ಪತ್ರ ಬರೆದಿದೆ ಎಂದು ಹೇಳಿದ್ದಾರೆ.

ಕೇರಳದ ಮೂಲಸೌಕರ್ಯ ಅಭಿವೃದ್ಧಿ, ಸಾಮಾಜಿಕ ಭದ್ರತಾ ಯೋಜನೆಗಳಿಗೆ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಸಾಲದ ಮಿತಿಯನ್ನು ನಿರ್ಬಂಧಿಸುವ ಮೂಲಕ ಕೇರಳದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳನ್ನು ತಡೆಯುವ ಪ್ರಯತ್ನ ಮಾಡುತ್ತಿದೆ ಎಂದು ಇದೇ ವೇಳೆ ಆರೋಪಿಸಿದ್ದಾರೆ.

ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿಯ ಸಾಲಗಳು ಸರ್ಕಾರದ ಸಾಲವಲ್ಲ, ಏಕೆಂದರೆ ಅದು ಕಾರ್ಪೊರೇಟ್ ಸಂಸ್ಥೆಯಾಗಿದೆ. KIIFB ಮತ್ತು ಕೇರಳ ಸಾಮಾಜಿಕ ಭದ್ರತಾ ಪಿಂಚಣಿ ಲಿಮಿಟೆಡ್ (KSSPL) ಗಳ ಸಾಲವನ್ನು ರಾಜ್ಯದ ಖಾತೆಗೆ ಸೇರಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರವು ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ಅವರು ಹೇಳಿದರು.

ಕೋವಿಡ್-ಪ್ರೇರಿತ ಆರ್ಥಿಕ ಕುಸಿತವನ್ನು ನಿವಾರಿಸಲು ಸರ್ಕಾರಗಳು ಹೆಚ್ಚಿನ ಹೂಡಿಕೆ ಮಾಡಬೇಕು. ಕೋವಿಡ್ -19 ಲಾಕ್‌ಡೌನ್ ಅವಧಿಯಲ್ಲಿ ಆಹಾರ ಕಿಟ್‌ಗಳು ಮತ್ತು ಇತರ ಉದ್ದೇಶಗಳಿಗಾಗಿ ಕೇರಳ ಸರ್ಕಾರ ಮಾಡಿದ ವೆಚ್ಚವನ್ನು ಅವರು ನೆನಪಿಸಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!