Wednesday, August 10, 2022

Latest Posts

ದೇಶದ ಜನತೆಗೆ ಗುಡ್ ನ್ಯೂಸ್: ಭಾರತಕ್ಕೆ ಬಂದ ʼSputnik Vʼ ಲಸಿಕೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ಸಂಕಷ್ಟದಲ್ಲಿರುವಾಗ ಈಗಾಗಲೇ ದೇಶೀಯ ಲಸಿಕೆಗಳಾದ ಕೋವಾಕ್ಸಿನ್‌, ಕೋವಿಶೀಲ್ಡ್‌ ಜನರಿಗೆ ಅಲ್ಪ ಆತಂಕ ದೂರು ಮಾಡಿದ್ದೂ, ಇದೀಗ ತುರ್ತು ಬಳಕೆಗೆ ಅನುಮೊದನೆ ಪಡೆದ ಮತ್ತೊಂದು ಲಸಿಕೆ ಸ್ಫುಟ್ನಿಕ್‌ ವಿ ರಷ್ಯಾದಿಂದ ಭಾರತಕ್ಕೆ ಬಂದು ತಲುಪಿದೆ.
ನೀತಿ ಆಯೋಗ ಸದಸ್ಯರಾದ ಡಾ. ವಿ.ಕೆ. ಪಾಲ್ ಅವರು ಈ ಮಾಹಿತಿಯನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಸ್ಫುಟ್ನಿಕ್‌ ಲಸಿಕೆ ಭಾರತಕ್ಕೆ ಬಂದಿದ್ದು, ಇದು ಮುಂದಿನ ವಾರ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ ಎಂದು ನಾವು ಭರವಸೆ ಹೊಂದಿದ್ದೇವೆ ಎಂದು ಹೇಳಲು ನನಗೆ ಸಂತೋಷವಾಗಿದೆ. ರಷ್ಯಾ ಬಂದಿರುವ ಸೀಮಿತ ಪೂರೈಕೆಯ ಮಾರಾಟ ಮುಂದಿನ ವಾರ ಪ್ರಾರಂಭವಾಗಲಿದೆ ಎಂದು ನಾವು ಭರವಸೆ ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಲಸಿಕೆ ತುರ್ತು ಬಳಕೆಯ ದೃಢೀಕರಣವನ್ನು ನೀಡಲು ಸಾಕಷ್ಟು ದತ್ತಾಂಶವಿದೆ ಎಂದು ನಿಯಂತ್ರಕರ ವಿಷಯ ತಜ್ಞರ ಸಮಿತಿ (ಎಸ್ ಇಸಿ) ಶಿಫಾರಸು ಮಾಡಿದ ಒಂದು ದಿನದ ನಂತರ, ಭಾರತದಲ್ಲಿ ತುರ್ತು ಬಳಕೆಗಾಗಿ ರಷ್ಯಾದ ಗಮಾಲೆಯಾ ಸಂಶೋಧನಾ ಸಂಸ್ಥೆ ಯಾದ ಸ್ಪುಟ್ನಿಕ್ ವಿ ಅಭಿವೃದ್ಧಿಪಡಿಸಿದ ಕೋವಿಡ್-19 ಲಸಿಕೆಗೆ ಭಾರತದ ಔಷಧ ನಿಯಂತ್ರಕ ಜನರಲ್ (ಡಿಸಿಜಿಐ) ವಿಜಿ ಸೋಮನಿ ಮಂಗಳವಾರ ಅನುಮೋದನೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss