ಬೆಲೆ ಏರಿಕೆಯ ಶಾಕ್’ನಲ್ಲಿದ್ದವರಿಗೆ ಗುಡ್ ನ್ಯೂಸ್: ಮೊಸರು, ಮಜ್ಜಿಗೆ ದರದಲ್ಲಿ ಕೊಂಚ ಇಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದಿನಿಂದ (ಜುಲೈ 18) ಆಹಾರ ಉತ್ಪನ್ನ ಸೇರಿ ಪ್ರಮುಖ ವಸ್ತುಗಳ ಮೇಲೆ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್ಟಿ(GST) ಜಾರಿ ಎಂದಿದ್ದು, ಇದರಿಂದ ಜನಸಾಮಾನ್ಯರಿಗೆ ಹೊಡೆತ ಬಿದ್ದಿದೆ.
ಆದರೆ ಇದರ ನಡುವೆ ಕೆಎಂಎಫ್ ಹಾಲಿನ ಉತ್ಪನ್ನಗಳ ದರ ಕೊಂಚ ಇಳಿಕೆ ಮಾಡಿದೆ. 5% ಜಿಎಸ್ಟಿ ಸೇರಿಸಿ ಕೆಎಂಎಫ್ ನೂತನ ದರ ಪಟ್ಟಿ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರದ ಅಧಿಸೂಚನೆ ಅನ್ವಯ ಜಾರಿಗೆ ಬರುವಂತೆ ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿ ಉತ್ಪನ್ನಗಳ ಮೇಲೆ ಜಿ.ಎಸ್.ಟಿ, (ಸರಕು ಮತ್ತು ಸೇವಾ ತೆರಿಗೆ) ವಿಧಿಸಲಾಗಿದೆ.
ಈ ಹಿನ್ನೆಲೆ ‘ನಂದಿನಿ’ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೊಟ್ಟಣಗಳ ಮಾರಾಟ ದರವನ್ನು ಪರಿಷ್ಕರಿಸಿದ್ದು, ನಾಳೆಯಿಂದ(ಜುಲೈ19) ದರದಲ್ಲಿ ಕೊಂಚ ದರ ಕಡಿಮೆ ಮಾಡಲಾಗಿದೆ.

200ML ಮೊಸರು ಈ ಹಿಂದೆ 10ರೂಪಾಯಿ ಇತ್ತು. ಕೇಂದ್ರ ಸರ್ಕಾರ GST ಹಾಕಿದ ಬಳಿಕ ಅದು 12ರೂಪಾಯಿಗೆ ಏರಿತ್ತು. ಅಂದರೆ ಎರಡು ರೂಪಾಯಿ ಏರಿಕೆ ಆದಂತಾಯ್ತು. ಇದೀಗ ಕೆಎಂಎಫ್‌ ದರ ಪರಿಷ್ಕರಣೆ ಪ್ರಕಾರ 200ML ಮೊಸರು ಇದೀಗ 10ರೂ 50 ಪೈಸೆಗೆ ಗ್ರಾಹಕನ ಕೈ ಸೇರಲಿದೆ . ಅಂದ್ರೆ, ಜೆಎಸ್‌ಟಿ ಸೇರಿಸಿ ಮುಂಚೆಗಿಂತ 1 ರೂಪಾಯಿ 50 ಪೈಸೆ ಹೆಚ್ಚಾದಂತಿದೆ.

ಕೆಎಂಎಫ್​ನ ನೂತನ ದರ ಪಟ್ಟಿ ಇಲ್ಲಿದೆ
* ಮೊಸರು 200ML ನಿನ್ನೆ(ಜು.17)- 10ರೂಪಾಯಿ ಇತ್ತು. ಇಂದು(ಜು.18) – 12ರೂಪಾಯಿಗೆ ಏರಿದೆ. ನಾಳೆಯಿಂದ (ಜುಲೈ19) 10ರೂ 50 ಪೈಸೆ ಇರಲಿದೆ.
* ಮೊಸರು 500ML ಎಂಎಲ್ ನಿನ್ನೆ(ಜು.17)- 22ರೂ, ಇಂದು(ಜು.18) –24ರೂ, ನಾಳೆಯಿಂದ (ಜುಲೈ19) – 23ರೂ.

* 1 ಲೀಟರ್ ಮೊಸರು ನಿನ್ನೆ(ಜು.17) -43ರೂ, ಇಂದು(ಜು.18)- 46, ನಾಳೆಯಿಂದ(ಜುಲೈ19)- 45ರೂ

* ಮಜ್ಜಿಗೆ 200ML ನಿನ್ನೆ(ಜು.17)- 7ರೂ, ಇಂದು(ಜು.18) – 8ರೂ, ನಾಳೆಯಿಂದ (ಜುಲೈ19) – 7ರೂ 50ಪೈಸೆ

* ಲಸ್ಸಿ 200ML ಎಂಎಲ್ ನಿನ್ನೆ(ಜು.17)-10ರೂ, ಇಂದು(ಜು.18) – 11ರೂ, ನಾಳೆಯಿಂದ(ಜುಲೈ19) – 10ರೂ 50ಪೈಸೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!