ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೊಮ್ಯಾಟೊ ಬೆಲೆ ಏರಿಕೆಯಿಂದಾಗಿ ಜನ ಹೈರಾಣಾಗಿದ್ದು, ಹುಣಸೆಹುಳಿ, ನಿಂಬೆಹುಳಿ ಮೊರೆ ಹೋಗಿದ್ದಾರೆ. ಮೊದಲಿಗೆ 80 ರೂಪಾಯಿ ಇದ್ದ ಟೊಮ್ಯಾಟೊ ಬೆಲೆ ಇದೀಗ 150 ರೂಪಾಯಿವರೆಗೂ ಮಾರಾಟವಾಗಿದೆ.
ಟೊಮ್ಯಾಟೊ ಬೆಲೆ ಇನ್ನೇನು ಮತ್ತೆ ಹೆಚ್ಚಾದೀತು ಎಂದುಕೊಂಡವರಿಗೆ ಸದ್ಯದಲ್ಲೇ ಖುಷಿ ಸಿದ್ದಿ ಸಿಗಲಿದೆ. ಟೊಮ್ಯಾಟೊ ಬೆಲೆ ಸೆಪ್ಟೆಂಬರ್‌ನಲ್ಲಿ ಇಳಿಕೆಯಾಗಲಿದೆ. ಕೆಜಿ ಟೊಮ್ಯಾಟೊಗೆ 60-70 ರೂಪಾಯಿ ಎಂದು ಅಂದಾಜಿಸಲಾಗಿದೆ. ಆಗಸ್ಟ್‌ನಲ್ಲಿ ಪೂರೈಕೆ ಹಾಗೂ ಬೇಡಿಕೆ ಸಮತೋಲನ ಇರುವುದಿಲ್ಲ. ಸೆಪ್ಟೆಂಬರ್‌ನಲ್ಲಿ ರೇಟ್ ಕಡಿಮೆಯಾಗಲಿದೆ. ಆದರೆ ಸೆಪ್ಟೆಂಬರ್‌ನಲ್ಲಿ ಈರುಳ್ಳಿ ರೇಟ್ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.