ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಊಟ, ಪಾನೀಯಗಳ ಮೇಲಿನ ಸರ್ವಿಸ್‌ ಚಾರ್ಚ್ ತೆಗೆದು ಹಾಕಿದ ಕೇಂದ್ರ ಸರ್ಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರೀಮಿಯಂ ರೈಲುಗಳಲ್ಲಿ ಪೂರ್ವ-ಆರ್ಡರ್ ಮಾಡದ ಎಲ್ಲಾ ಊಟ ಮತ್ತು ಪಾನೀಯಗಳ ಮೇಲಿನ ಆನ್-ಬೋರ್ಡ್ ಸೇವಾ ಶುಲ್ಕಗಳನ್ನ ತೆಗೆದುಹಾಕಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
ಈ ಕುರಿತು ಸುತ್ತೋಲೆ ಹೊರಡಿಸಿದ ಭಾರತೀಯ ರೈಲ್ವೆ, ಪ್ರೀಮಿಯಂ ರೈಲುಗಳಲ್ಲಿ ಪೂರ್ವ-ಆರ್ಡರ್ ಮಾಡದ ಎಲ್ಲಾ ಊಟ ಮತ್ತು ಪಾನೀಯಗಳ ಮೇಲಿನ ಆನ್-ಬೋರ್ಡ್ ಸೇವಾ ಶುಲ್ಕಗಳನ್ನ ತೆಗೆದುಹಾಕಲಾಗಿದೆ. ಆದಾಗ್ಯೂ, ಪ್ರಯಾಣಿಕರು ಆರ್ಡರ್ ಮಾಡುತ್ತಿರುವ ಮತ್ತು ಟಿಕೆಟ್ ಕಾಯ್ದಿರಿಸುವಾಗ ಮುಂಚಿತವಾಗಿ ಕಾಯ್ದಿರಿಸದ ತಿಂಡಿಗಳು, ಊಟಗಳು ಮತ್ತು ರಾತ್ರಿ ಊಟಗಳ ಬೆಲೆಗಳ ಮೇಲೆ ಹೆಚ್ಚುವರಿ 50 ಶುಲ್ಕ ವಿಧಿಸಲಾಗುತ್ತದೆ.
ಈ ಹಿಂದೆ, ಭಾರತೀ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC), ವ್ಯಕ್ತಿಯು ತನ್ನ ರೈಲು ಟಿಕೆಟ್‌ನೊಂದಿಗೆ ತಮ್ಮ ಊಟವನ್ನ ಕಾಯ್ದಿರಿಸದಿದ್ದರೇ, ಪ್ರಯಾಣದ ಸಮಯದಲ್ಲಿ ಆಹಾರವನ್ನ ಆರ್ಡರ್ ಮಾಡುವಾಗ ಹೆಚ್ಚುವರಿ 50 ಶುಲ್ಕ ವಿಧಿಸುತ್ತಿತ್ತು.
ಆದರೆ ಇದೀಗ ಪ್ರಸ್ತುತ ಸುತ್ತೋಲೆಯ ನಂತರ, ರಾಜಧಾನಿ, ಡುರೊಂಟೊ ಅಥವಾ ಶತಾಬ್ದಿಯಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಊಟವನ್ನ ಮುಂಚಿತವಾಗಿ ಕಾಯ್ದಿರಿಸದಿದ್ದರೂ, ಚಹಾಕ್ಕೆ 20 ಪಾವತಿಸಬೋದು(ತಮ್ಮ ಊಟವನ್ನು ಮುಂಚಿತವಾಗಿ ಕಾಯ್ದಿರಿಸಿದವರು ಪಾವತಿಸಿದ ಮೊತ್ತಕ್ಕೆ ಸಮನಾಗಿರುತ್ತದೆ). ಅಂದ್ಹಾಗೆ, ಈ ಹಿಂದೆ ಅಂತಹ ಪೂರ್ವ-ಕಾಯ್ದಿರಿಸದ ಚಹಾದ ವೆಚ್ಚವು ಸೇವಾ ಶುಲ್ಕ ಸೇರಿದಂತೆ 70 ಆಗಿತ್ತು.
ಪ್ರಯಾಣಿಕರು ಈಗ ಉಪಾಹಾರ, ಮಧ್ಯಾಹ್ನದ ಊಟ ಮತ್ತು ಸಂಜೆಯ ತಿಂಡಿಗೆ ಕ್ರಮವಾಗಿ 105, 185 ಮತ್ತು 90 ಇದ್ದ ಸೇವಾ ಶುಲ್ಕವನ್ನ ಹೆಚ್ಚುವರಿಯಾಗಿ 155, 235 ಮತ್ತು 140 ಪಾವತಿಸಬೇಕಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!