Tuesday, August 16, 2022

Latest Posts

ಉಪ್ಪಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ದೀಪಾವಳಿಗೆ ‘ಕಬ್ಜ’ ಚಿತ್ರದ ಟೀಸರ್ ಬಿಡುಗಡೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸ್ಯಾಂಡಲ್ ವುಡ್ ನಟ, ಸೂಪರ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬದ ಹಿನ್ನೆಲೆ ನಿನ್ನೆ ‘ಕಬ್ಜ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಉಪ್ಪಿ ಅಭಿಮಾನಿಗಳು ಪೊಸ್ಟರ್ ನೋಡಿ ಫುಲ್ ಖುಷ್ ಆಗಿದ್ದಾರೆ.

‘ಕಬ್ಜ’ ಚಿತ್ರದ ಮೋಷನ್ ಪೋಸ್ಟರ್‌ನಲ್ಲಿ ಉಪೇಂದ್ರ ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಖಡ್ಗ ಹಿಡಿದು ಪೋಸ್ ಕೊಟ್ಟಿರುವ ಉಪ್ಪಿ ಅವರ ಲುಕ್‌ಗೆ ಅಭಿಮಾನಿಗಳು ಪಿಧಾ ಆಗಿದ್ದು, ಟೀಸರ್ ನೋಡಲು ಕಾತುರರಾಗಿದ್ದಾರೆ.

ಈ ‘ಕಬ್ಜ’ ಸಿನಿಮಾದ ಟೀಸರ್ ದೀಪಾವಳಿ ಹಬ್ಬದಂದು ಬಿಡುಗಡೆಯಾಗಲಿದೆ ಎಂದು  ಚಿತ್ರ ತಂಡ ಸುಳಿವು ನೀಡಿದೆ.

ಶೇಕಡ 60ರಷ್ಟು ‘ಕಬ್ಜ’ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರ ನಿರ್ಮಾಣದ ಜವಾಬ್ದಾರಿಯನ್ನೂ ಆರ್.ಚಂದ್ರು ಹೊತ್ತಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss