ಸೀತಾಫಲ ಯಾರಿಗಿಷ್ಟ ಇಲ್ಲ ಹೇಳಿ? ಆದರೆ ಇದನ್ನು ತಿನ್ನುವಾಗ ಎಷ್ಟು ಹುಷಾರಿದ್ದರೂ ಅಷ್ಟು ಸಾಲದು. ಸ್ವಲ್ಪ ಕಾಯಿ ಎನಿಸುವ ಹಣ್ಣುಗಳನ್ನು ತಿನ್ನೋದಕ್ಕೆ ಆಗೋದಿಲ್ಲ. ಇನ್ನು ಸಂಪೂರ್ಣ ಹಣ್ಣಾಗಿದ್ದರೆ ಅದರಲ್ಲಿ ಹುಳ ಇರುತ್ತದೆ. ಅದೂ ಬಿಳಿ ಬಣ್ಣದ್ದೇ! ಆದರೆ ಹುಳಕ್ಕೆ ಹೆದರಿ ಹಣ್ಣು ಬಿಡೋಕಾಗತ್ತಾ?
- ಸೀತಾಫಲ ತಿಂದರೆ ಏನೆಲ್ಲಾ ಲಾಭ ಗೊತ್ತಾ?
- ಅತಿ ಹೆಚ್ಚು ಆಂಟಿಆಕ್ಸಿಡೆಂಟ್ಸ್ ಇದರಲ್ಲಿದೆ.
- ತಿಂದ ಸ್ವಲ್ಪ ಸಮಯದಲ್ಲೇ ನಮ್ಮ ಮೂಡ ಫ್ರೆಶ್ ಆಗುತ್ತದೆ.
- ಕಣ್ಣಿನ ಆರೋಗ್ಯಕ್ಕೂ ಸೀತಾಫಲ ಒಳಿತು.
- ಹೈ ಬಿಪಿ ಇರುವವರಿಗೆ ಇದು ಉತ್ತಮ ಹಣ್ಣು.
- ಜೀರ್ಣಕ್ರಿಯೆ ಸಮಸ್ಯೆ ಇದ್ದರೆ ಪ್ರತಿದಿನವೂ ಸೀತಾಫಲ ತಿನ್ನಿ.
- ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಇವುಗಳಲ್ಲಿದೆ.
- ಇಮ್ಯುನಿಟಿ ಹೆಚ್ಚಿಸಲು ಮಾತ್ರೆಗಳ ಮೊರೆ ಹೋಗುವ ಬದಲು ಸೀತಾಫಲ ತಿನ್ನಿ.
- ಇದರಲ್ಲಿ ಹೆಚ್ಚು ಸಕ್ಕರೆ ಅಂಶ ಇದೆ. ಹಾಗಾಗಿ ಅತಿ ಹೆಚ್ಚು ತಿಂದರೆ ತೂಕ ಹೆಚ್ಚಳವಾಗಬಹುದು.