Sunday, August 14, 2022

Latest Posts

ಕಾಂಗ್ರೆಸ್‌ಗೆ ಗುಡ್ ಬೈ ಎಂದ ಕ್ಯಾ. ಅಮರೀಂದರ್ ಸಿಂಗ್: ಹೊಸ ಪಕ್ಷ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ನನ್ನ ರಾಜ್ಯ ಮತ್ತು ನನ್ನ ದೇಶದ ಹಿತದೃಷ್ಟಿಯಿಂದ ನಾನು ಈ ಮೂಲಕ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತೇನೆ ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಸಿಂಗ್, ‘ನನ್ನ ತೀವ್ರವಾದ ಸಂಯಮದ ಹೊರತಾಗಿಯೂ ಮತ್ತು ಪಂಜಾಬ್‌ನ ಬಹುತೇಕ ಎಲ್ಲಾ ಸಂಸದರ ಒಮ್ಮತದ ಸಲಹೆಯ ಹೊರತಾಗಿಯೂ, ನೀವು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಸಾರ್ವಜನಿಕವಾಗಿ ಅಪ್ಪಿಕೊಂಡಿದ್ದ ನವಜೋತ್ ಸಿಂಗ್ ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲು ಆಯ್ಕೆ ಮಾಡಿಕೊಂಡಿದ್ದೀರಿ. 1954ರಲ್ಲಿ ನಾವು ಶಾಲೆಯಲ್ಲಿ ಜತೆಯಾಗಿದ್ದೆವು, ಅಂದರೆ ಈಗ 67 ವರ್ಷಗಳು. ನಾನು ನನ್ನ ಮಕ್ಕಳಂತೆ ತೀವ್ರವಾಗಿ ಪ್ರೀತಿಸುವ ನಿಮ್ಮ ಮಕ್ಕಳ ಅಪ್ಪನನ್ನು ಚೆನ್ನಾಗಿ ಬಲ್ಲೆ. ನಿಮ್ಮ ನಡತೆಯಿಂದ ನನಗೆ ನೋವಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಪಂಜಾಬ್‌ ಲೋಕ್ ಕಾಂಗ್ರೆಸ್‌ ಪಕ್ಷ
ಇದೇ ವೇಳೆ ತಮ್ಮ ಹೊಸ ಪಕ್ಷಕ್ಕೆ ‘ಪಂಜಾಬ್‌ ಲೋಕ್‌ ಕಾಂಗ್ರೆಸ್‌’ ಎಂದು ಹೆಸರಿಟ್ಟಿದ್ದಾರೆ. ಪಕ್ಷದ ನೋಂದಣಿ ಬಾಕಿ ಇದ್ದು, ಚುನಾವಣೆ ಆಯೋಗ ಅನುಮೋದನೆ ನೀಡಬೇಕಿದೆ. ಪಕ್ಷದ ಚಿಹ್ನೆಯನ್ನು ಕೆಲವೇ ದಿನಗಳಲ್ಲಿ ಪಡೆಯುವುದಾಗಿ ಅಮರೀಂದರ್‌ ಸಿಂಗ್‌ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss