ಏಷ್ಯಾ ಪೆಸಿಫಿಕ್ ಡೆಫ್ ಚೆಸ್ ಚಾಂಪಿಯನ್‌ಶಿಪ್: ಬೇಲೂರಿನ ಶ್ರೇಯಾಗೆ ಬಂಗಾರದ ಪದಕ

ಹೊಸದಿಗಂತ ವರದಿ ಬೇಲೂರು: ತಾಲೂಕಿನ ಯಮಸಂಧಿ ಗ್ರಾಮದ ಸಚಿನ್ ವೈ.ಸಿ. ಹಾಗೂ ಸಾಧನ ಎಸ್.ಬಿ. ದಂಪತಿ ಪುತ್ರಿ ಶ್ರೇಯಾ ವೈ.ಎಸ್. ಅವರು ಪೆನಾಂಗ್‌ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಡೆಫ್ (ಕಿವುಡರ) ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಭಾರತ, ರಾಜ್ಯ ಹಾಗೂ ಹಾಸನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬೇಲೂರಿನ ಪೂರ್ಣಪ್ರಜ್ಞಾ ಶಾಲೆಯಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.76 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿರುವ ಶ್ರೇಯಾ, ಪ್ರಸ್ತುತ ಬೇಲೂರಿನ ವಿದ್ಯಾವಿಕಾಸ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. … Continue reading ಏಷ್ಯಾ ಪೆಸಿಫಿಕ್ ಡೆಫ್ ಚೆಸ್ ಚಾಂಪಿಯನ್‌ಶಿಪ್: ಬೇಲೂರಿನ ಶ್ರೇಯಾಗೆ ಬಂಗಾರದ ಪದಕ