ಪರಸ್ಪರ ಬೆಂಬಲದ ಥೀಮ್‌ನೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಕ್ಕೆ ಗೂಗಲ್‌ ಡೂಡಲ್‌ ಗೌರವ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

2023ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಂದು ಗೂಗಲ್ ವಿಶೇಷ ಡೂಡಲ್ ರಚಿಸುವ ಮೂಲಕ ವಿಶ್ವದಾದ್ಯಂತ ಮಹಿಳೆಯರಿಗೆ ಗೌರವ ಸಲ್ಲಿಸಿದೆ. ಮಹಿಳೆಯರು ತಮ್ಮ ದೈನಂದಿನ ಜೀವನದಲ್ಲಿ ಪರಸ್ಪರ ಬೆಂಬಲ ಮತ್ತು ಸಹಾಯವನ್ನು ಒದಗಿಸುವ ವಿಧಾನವನ್ನು ಪ್ರಮುಖವಾಗಿ ಸೂಚಿಸಿದೆ.

ಇಂದಿನ ಡೂಡಲ್ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುತ್ತಾರೆ, ವಿಜ್ಞಾನ ಮತ್ತು ವೈದ್ಯಕೀಯದಲ್ಲಿ ಮಹಿಳೆಯರ ಪಾತ್ರ ಮತ್ತು ತಾಯ್ತನದಲ್ಲಿ ಪರಸ್ಪರ ನಿರ್ಣಾಯಕ ಬೆಂಬಲ ವ್ಯವಸ್ಥೆಯಾಗಿ ಮಹಿಳೆಯನ್ನು ಬಿಂಬಿಸಲಾಗಿದೆ.

“ಈ ವರ್ಷದ ನಮ್ಮ ಥೀಮ್ ‘ಮಹಿಳೆಯರನ್ನು ಬೆಂಬಲಿಸುವುದು’, ಆದ್ದರಿಂದ ನನ್ನ ಜೀವನದಲ್ಲಿ ಇತರ ಮಹಿಳೆಯರು ನನ್ನನ್ನು ಬೆಂಬಲಿಸಿದ ಎಲ್ಲಾ ವಿಧಾನಗಳನ್ನು ಪ್ರತಿಬಿಂಬಿಸಿದ್ದೇನೆ” ಎಂದು ಈ ವರ್ಷದ ಚಿತ್ರಣವನ್ನು ವಿವರಿಸಿದ ಡೂಡಲ್ ಕಲಾವಿದೆ ಅಲಿಸ್ಸಾ ವಿನಾನ್ಸ್ ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!