Wednesday, August 10, 2022

Latest Posts

ದಕ್ಷಿಣ ಏಷ್ಯಾದ ಮೊದಲ ಮಹಿಳಾ ವೈದ್ಯೆ: ಕದಂಬಿನಿ ಜನ್ಮದಿನಕ್ಕೆ ಡೂಡಲ್ ಮೂಲಕ ಗೂಗಲ್ ಗೌರವ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪಾಶ್ಚಾತ್ಯ ದೇಶದಲ್ಲಿ ವೈದ್ಯಕೀಯ ಪದವಿ ಪಡೆದ ದಕ್ಷಿಣ ಏಷ್ಯಾದ ಮೊದಲ ಮಹಿಳಾ ವೈದ್ಯೆ ಕದಂಬಿನಿ ಗಂಗೂಲಿ ಗೆ ಗೂಗಲ್ ತನ್ನ ಡೂಡಲ್ ಮೂಲ ವಿಶೇಷ ಗೌರವ ಸಮರ್ಪಿಸಿದೆ.
ಇಂದು ಕಂದಂಬಿನಿ ಗಂಗೂಲಿ ಅವರ 160ನೇ ಜನ್ಮದಿನ. ಇವರು ಪಶ್ಚಾತ್ಯ ಮದ್ದಿನ ಪದವಿ ಪಡೆದ ಏಷ್ಯಾದ ಮೊದಲ ಮಹಿಳಾ ವೈದ್ಯೆಗೆ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ.ಕದಂಬಿನಿ ಅವರು 1861ರಲ್ಲಿ ಬ್ರಹ್ಮ ಸಮಾಜದ ಸುಧಾರಕ ಬ್ರಜ ಕಿಶೋರ್ ಅವರ ಮಗಳಾಗಿ ಬಿಹಾರದ ಬಗಲ್ಪುರದಲ್ಲಿ ಜನಸಿದರು.ಇವರು 1884 ರಲ್ಲಿ ಕಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದ ಮೊದಲ ಮಹಿಳೆ. ಈ ಬಳಿಕ ಆನಂದಿ ಗೋಪಾಲ್ ಜೋಶಿಯಾರೊಂದಿಗೆ ಸೇರಿ ಪಾಶ್ಚಿಮಾತ್ಯ ಮದ್ದನ್ನು ಆಚರಣೆಗೆ ತಂದ ಇವರು ಮೊದಲ ಭಾರತೀಯ ಮಹಿಳಾ ವೈದ್ಯರಾದರು. ಬಳಿಕ ಲಂಡನ್​​ಗೆ 1892ರಲ್ಲಿ ತೆರಳಿ ಈಡನ್​ಬರ್ಗ್​ ವಿವಿಯಲ್ಲಿ ಎಲ್​ಆರ್​ಸಿಪಿ, ಗ್ಲಾಸುಗೌ ವಿದ್ಯಾಲಯದಲ್ಲಿ ಎಲ್​ಆರ್​ಸಿಎಸ್​ ಮತ್ತು ಡಬ್ಲಿನ್ ಸಂಸ್ಥೆಯಲ್ಲಿ ಜಿಎಫ್​ಪಿಎಸ್​ ಪರೀಕ್ಷೆಗಳನ್ನು ಬರೆದು, ಉತ್ತೀರ್ಣರಾಗಿ ತಾಯ್ನಾಡಿಗೆ ಹಿಂತಿರುಗಿ ಭಾರತದಲ್ಲಿ ಸೇವೆ ಸಲ್ಲಿಸಿದವರು ಕದಂಬಿನಿ ಗಂಗೂಲಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss