Wednesday, August 10, 2022

Latest Posts

Remove China App ಅನ್ನು ಡಿಲೀಟ್ ಮಾಡಿದ Google Play Store

ಹೊಸದಿಲ್ಲಿ: ಚೀನಾದ ಟಿಕ್ ಟಾಕ್ ಅನ್ನು ಭಾರತದ ಜನತೆ Uninstall ಮಾಡಿ, ಅದಕ್ಕೆ ಅತೀ ಕಡಿಮೆ ರೇಟಿಂಗ್ ನೀಡುವ ಮೂಲಕ ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಮಾಡುವಂತೆ ಕೋರಿತ್ತು. ಆದರೆ ಗೋಗಲ್ ಪ್ಲೇ ಸ್ಟೋರ್ ನಲ್ಲಿ ಟಿಕ್ ಟಾಕ್ ನ ಪ್ರತಿ ಸ್ಪರ್ಧಿ ಎನ್ನುವ Mitron ಆ್ಯಪ್ ಅನ್ನು ಡಿಲೀಟ್ ಮಾಡಿದ್ದು, ಇದೀಗ Remove China App ಅನ್ನು ಕೂಡ ತೆಗೆದು ಹಾಗಿದೆ.

ಆ್ಯಪ್ ಡೆವೆಲಪರ್ ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, Play Store Remove China App ಅನ್ನು ತೆಗೆದು ಹಾಕಿದೆ. 2 ವಾರಗಳಿಂದ ನೀವು ತೋರಿದ ಪ್ರೀತಿಗೆ ಧನ್ಯವಾದ ಎಂದು ತಿಳಿಸಿದ್ದಾರೆ.

ಟ್ವಿಟರ್ ಟ್ರೆಂಡ್: ಇಂದು ಈ ಬಗ್ಗೆ ಟ್ವಿಟರ್ ಟ್ರೆಂಡ್ ಆಗುತ್ತಿದ್ದು, ಗೋಗಲ್ ಪ್ಲೇ ಸ್ಟೋರ್ ಕುರಿತು ಜನರು ಕಿಡಿಕಾರುತ್ತಿದ್ದಾರೆ. ಟಿಕ್ ಟಾಕ್ ವಿರುದ್ಧ ನೀಡಿದ್ದ 80 ಲಕ್ಷ ನೆಗಟಿವ್ ಕಮೆಂಟ್ ಗಳನ್ನು ಡಿಲೀಟ್ ಮಾಡಿದ್ದು, 5 ಮಿಲಿಯನ್ ಡೌನ್ ಲೋಡ್ ಹೊಂದಿರುವ Remove China App ಡಿಲೀಟ್ ಮಾಡಿದೆ ಎಂದು ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss