Monday, August 8, 2022

Latest Posts

ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡ ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ರಾಜ್ಯ ಕಾರ್ಯದರ್ಶಿ ಗೋಪಾಲ್ ಕುಲಕರ್ಣಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಹುಬ್ಬಳ್ಳಿ:

ಆಮ್ ಆದ್ಮಿ ಪಕ್ಷದ ಸರಳ ಹಾಗೂ ಸ್ವಚ್ಚ ರಾಜಕಾರಣ ಎಲ್ಲ ಜನರ ಮೆಚ್ಚುಗೆಗೆ ಪಾತ್ರವಾಗಿ ಎಲ್ಲ ಸ್ತರದ ಜನಾಂಗವನ್ನು ಆಕರ್ಷಿಸುತ್ತಿದೆ. ಈ ಮಾದರಿಯ ರಾಜಕಾರಣವನ್ನು ಮತ್ತು ವಿಶ್ವದರ್ಜೆಯ ಹು – ಧಾ ಕಟ್ಟುವ ಪಕ್ಷದ ಗುರಿಯನ್ನು ಮೆಚ್ಚಿ ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ರಾಜ್ಯ ಕಾರ್ಯದರ್ಶಿ ಗೋಪಾಲ್ ಕುಲಕರ್ಣಿಯವರು ತಮ್ಮ ಬೆಂಬಲಿಗರ ತಂಡದೊಂದಿಗೆ  ಆಮ್ ಆದ್ಮಿ ಪಕ್ಷಕ್ಕೆ ಸಾಂಕೇತಿಕವಾಗಿ ಸೇರ್ಪಡೆಯಾದರು. ಇವರನ್ನು ರಾಜ್ಯ ಸಹ ಸಂಚಾಲಕರಾದ ಶಾಂತಲಾ ದಾಮ್ಲೆ, ಜಿಲ್ಲಾ ಅಧ್ಯಕ್ಷರಾದ ಸಂತೋಷ್ ನರಗುಂದ ಅವರು ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಬರಮಾಡಿಕೊಂಡರು.

ಗೋಪಾಲ್ ಕುಲಕರ್ಣಿ ಯವರು ಕರ್ನಾಟಕ ಶಿಕ್ಷಣ ಸೇವಾ ಸಮಿತಿ ಪಿ ಯು ಕಾಲೇಜ್ ಪೇಜಾವರ ಮಠದ ಜಂಟಿ ಕಾರ್ಯದರ್ಶಿ ಮತ್ತು ತಿರುಮಲ ತಿರುಪತಿ ದೇವಸ್ಥಾನ ದಾಸ ಸಾಹಿತ್ಯ ಪ್ರಾಜೆಕ್ಟ್ ನ ಸಹಸಂಚಾಲಕರು. ಅದಲ್ಲದೆ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಾತೀತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜನ ಮನದಲ್ಲಿ ಮನೆ ಮಾತಾಗಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಗೋಪಾಲ್ ಕುಲಕರ್ಣಿ ಯವರು ಸಾಮಾಜಿಕ, ಆರ್ಥಿಕ, ಧಾರ್ಮಿಕ  ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತ ಈಗ ಹುಬ್ಬಳ್ಳಿ-ಧಾರವಾಡದ ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ಬೇಕಾಗಿದೆ ಎಂದು ಆಮ್ ಆದ್ಮಿ ಪಕ್ಷಕ್ಕೆ ಸೇರುತ್ತಿದೇನೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾಲತೇಶ್ ಗ್ರಮಪುರೋಹಿತ, ಎನ್.ಎಸ್. ನಾಡಿಗೇರ, ಶಶಿಕುಮಾರ್ ಸುಲ್ಲದ ಮತ್ತು ಅಶ್ವಿನ್ ಕುಮಾರ್ ಕುಬಸದಗೌಡರ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss