Friday, August 12, 2022

Latest Posts

ಗೋಹತ್ಯೆ, ಗೋಮಾಂಸ ಸೇವನೆ, ಸಾಗಣೆಗೆ ಕಡಿವಾಣ: ಅಸ್ಸಾಂನಲ್ಲಿ ಮಸೂದೆ ಮಂಡನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೋಮವಾರ ರಾಜ್ಯದ ಅಸೆಂಬ್ಲಿಯಲ್ಲಿ ‘ದನಗಳ ವಧೆ, ಬಳಕೆ, ದನಗಳ ಅಕ್ರಮ ಸಾಗಣೆ’ ಯನ್ನು ನಿಯಂತ್ರಿಸುವ ಉದ್ದೇಶದಿಂದ ಅಸ್ಸಾಂ ಜಾನುವಾರು ಸಂರಕ್ಷಣಾ ಮಸೂದೆ-2021 ಯನ್ನು ಮಂಡಿಸಿದರು. ಗೋಹತ್ಯೆ, ಗೋಮಾಂಸ ಸೇವನೆ, ಸಾಗಣೆ ಪ್ರಕರಣದಲ್ಲಿ ಕಟ್ಟುನಿಟ್ಟಿನ ಕ್ರಮಗಳಿಗೆ ಅವಕಾಶ ಇರದಿದ್ದ ಹಾಲಿ 1950ರ ಕಾಯ್ದೆ ಬದಲು ಹೊಸ ಕಾಯ್ದೆ ತರುವುದು ಉದ್ದೇಶ.
ರಾಜ್ಯದಲ್ಲಿ ಹಿಂದು, ಜೈನರು, ಸಿಖ್ಖರು ಮತ್ತು ಗೋಮಾಂಸ ಸೇವಿಸದ ಇತರೆ ಸಮುದಾಯದವರು ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ ಗೋಮಾಂಸ ಮಾರಾಟ ನಿಷೇಧಿಸಲು ಸರ್ಕಾರ ಉದ್ದೇಶಿಸಿದೆ.ಅದರ ಪ್ರಕಾರ ದೇಗುಲ ಸೇರಿ ಹಿಂದು ಧಾರ್ಮಿಕ ಸಂಸ್ಥೆಗಳ 5 ಕಿ.ಮೀ. ವ್ಯಾಪ್ತಿಯಲ್ಲಿ ಗೋಮಾಂಸ ಮಾರಾಟವನ್ನು ನಿರ್ಬಂಧಿಸಲಾಗುತ್ತದೆ.
ಅಸ್ಸಾಂ ಸರ್ಕಾರದ ಅನುಮತಿಯಿಲ್ಲದೇ ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಗೋಮಾಂಸ ಸಾಗಣೆಯನ್ನೂ ನಿರ್ಬಂಧಿಸಲು ಮಸೂದೆ ಅವಕಾಶ ನೀಡಲಿದೆ.
ಹಾಲಿ ಕಾಯ್ದೆಯಡಿ, 14 ವರ್ಷ ಮೀರಿದ ಜಾನುವಾರುಗಳ ಹತ್ಯೆಗೆ ಅವಕಾಶವಿತ್ತು. ಉದ್ದೇಶಿತ ಮಸೂದೆಯು ಲೈಸೆನ್ಸ್‌ ಹೊಂದಿರುವ ಕಸಾಯಿಖಾನೆಗಳಲ್ಲಿಯಷ್ಟೇ ಗೋಹತ್ಯೆಗೆ ಅವಕಾಶ ನೀಡಿದೆ. ನಿಯಮಗಳ ಉಲ್ಲಂಘನೆ ಸಾಬೀತಾದಲ್ಲಿ 3 ರಿಂದ 5 ವರ್ಷ ಸಜೆ ಮತ್ತು 3ಲಕ್ಷದಿಂದ 5 ಲಕ್ಷವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss