ನನ್ನ ಗಂಗು ಸಿಕ್ಕಿದ್ದಾನೆ, ಎಲ್ಲರಿಗೂ ಥ್ಯಾಂಕ್ಸ್: ಮುದ್ದಿನ ಶ್ವಾನ ಸಿಕ್ಕ ಖುಷಿಯಲ್ಲಿ ನಟಿ ಸುಧಾರಾಣಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಯಾಂಡಲ್ ವುಡ್ ಹಿರಿಯ ನಟಿ ಸುಧಾರಾಣಿ (Sudharani) ಇತ್ತೀಚೆಗೆ ತಮ್ಮ ಮುದ್ದಿನ ಶ್ವಾನ ಕಳೆದು ಹೋಗಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು.

ಇದೀಗ ಮುದ್ದಿನ ಶ್ವಾನ ಗಂಗು ಸಿಕ್ಕಿದು ಖುಷಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ ಅವರು, ನಮಸ್ಕಾರ ನನಗೆ ತುಂಬಾ ಖುಷಿಯಾಗಿದೆ. ನನ್ನ ಗಂಗು ಸಿಕ್ಕಿದ್ದಾಳೆ. ಗಂಗುಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ಶಬೀರ್ ಪಾಷ, ಅಮನ್ ದೀಪ್ ಸಿಂಗ್, ಪೂಜಾ ಎಲ್ಲರಿಗೂ ಧನ್ಯವಾದಗಳು.ಗಂಗು ಹತ್ತಿರನೇ ಕಾದು ಕುಳಿತು ಎಲ್ಲಿಗೂ ಹೋಗದಂತೆ ನೋಡಿಕೊಂಡು ಅದನ್ನು ರಕ್ಷಿಸಿ ತಂದು ಕೊಟ್ಟ ಶಬೀರ್ ಮತ್ತು ಅಮನ್ ದೀಪ್ ಅವರಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಸುಧಾರಾಣಿ ಅವರ ಮನೆಯ ಪ್ರೀತಿಯ ನಾಯಿ ಗಂಗು ಕಳೆದುಹೋಗಿತ್ತು. ಕಳೆದ 15 ದಿನಗಳಿಂದ ನಾಯಿ ಕಾಣಿಸುತ್ತಿಲ್ಲ ಹುಡುಕಿ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿ ಭಾವುಕ ಪೋಸ್ಟ್ ಶೇರ್ ಮಾಡಿದ್ದರು. ಅಲ್ಲದೇ ಬಿಬಿಎಂಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!