ಅಮೆರಿಕದಲ್ಲಿ ನೆಲೆಸಲು ಗೋಟಬಯಾ ರಾಜಪಕ್ಸೆ ಪ್ರಯತ್ನ: ಗ್ರೀನ್ ಕಾರ್ಡ್‌ಗಾಗಿ ಅರ್ಜಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜನರ ತೀವ್ರ ವಿರೋಧದಿಂದಾಗಿ ಶ್ರೀಲಂಕಾದ ಮಾಜಿ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ದೇಶದಿಂದ ಪಲಾಯನಗೈದು ಸೂಕ್ತ ನೆಲೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಸ್ತುತ ಥಾಯ್ಲೆಂಡ್‌ನಲ್ಲಿರುವ ಅವರು, ಅಮೆರಿಕದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದಾರೆ. ಇದರ ಹಿಂದೆ ಒಂದು ಕಾರಣವಿದೆ. ಥಾಯ್ಲೆಂಡ್‌ನಲ್ಲಿ ಅವರಿಗೆ ಎರಡರಿಂದ ಮೂರು ತಿಂಗಳ ಕಾಲ ಆ ದೇಶದಲ್ಲಿ ಇರಲು ಅವಕಾಶ ನೀಡಲಾಗಿದೆ. ಅದರ ನಂತರ ನೀವು ದೇಶವನ್ನು ತೊರೆಯಬೇಕು ಎಂದು ಅಲ್ಲಿನ ಪ್ರಧಾನಿ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಶ್ರೀಲಂಕಾ ಬರುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಅಮೆರಿಕಾಕ್ಕೆ ಹೋಗಿ ಅಲ್ಲೇ ನೆಲೆಸಿದರೆ ಒಳಿತು ಎಂದು ಕುಟುಂಬ ಸದಸ್ಯರು ಸಲಹೆ ನೀಡಿದ್ದಾರಂತೆ. ಗೋಟಬಯಾ ಅವರ ಪತ್ನಿ ಲೋಮಾ ರಾಜಪಕ್ಸೆ ಯುನೈಟೆಡ್ ಸ್ಟೇಟ್ಸ್ ಗ್ರೀನ್ ಕಾರ್ಡ್ ಹೊಂದಿದ್ದಾರೆ.  ತಮ್ಮ ಪತ್ನಿ ಮತ್ತು ಮಗನ ಜೊತೆ ತಾನೂ ಗ್ರೀನ್ ಕಾರ್ಡ್ ಪಡೆದು ಅಮೆರಿಕಾದಲ್ಲಿ ನೆಲೆಸುತ್ತಾರೆ ಎಂದು ಶ್ರೀಲಂಕಾ ಮಾಧ್ಯಮಗಳು ವರದಿ ಮಾಡಿವೆ. ಅದಕ್ಕಾಗಿ ಅವರು ವಕೀಲರ ಮೂಲಕ ತೀವ್ರ ಪ್ರಯತ್ನಗಳು ನಡೆಯುತ್ತಿವೆ. ಈ ಹಿಂದೆ ಗೋಟಾಬಯ ರಾಜಪಕ್ಸೆ ಕೂಡ ಅಮೆರಿಕದ ಪೌರತ್ವ ಹೊಂದಿದ್ದರು. ಆದಾಗ್ಯೂ, 2019 ರಲ್ಲಿ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಪಕ್ಸೆ ತಮ್ಮ ಯುಎಸ್ ಪೌರತ್ವವನ್ನು ತ್ಯಜಿಸಿದರು. ಅವರು ಮತ್ತೆ ಯುಎಸ್ ಪೌರತ್ವ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಪ್ರಸ್ತುತ, ಗೋಟಬಯಾ ಅವರು ತಮ್ಮ ಪತ್ನಿಯೊಂದಿಗೆ ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿರುವ ಹೋಟೆಲ್‌ನಲ್ಲಿ ತಂಗಿದ್ದಾರೆ. ಆದರೆ ಅವರು ಆಗಸ್ಟ್ 25 ರಂದು ಶ್ರೀಲಂಕಾಕ್ಕೆ ಹಿಂದಿರುಗುವ ನಿರೀಕ್ಷೆಯಿದೆ, ಎರಡು ದಿನಗಳ ಹಿಂದೆ ರಾಜಪಕ್ಸೆ ಅವರು ತಮ್ಮ ವಕೀಲರನ್ನು ಸಂಪರ್ಕಿಸಿ ಭದ್ರತಾ ಕಾರಣಗಳಿಂದಾಗಿ ಥಾಯ್ಲೆಂಡ್‌ನಲ್ಲಿ ಮುಕ್ತವಾಗಿ ಉಳಿಯಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾಕ್ಕೆ ಮರಳಲು ನಿರ್ಧರಿಸಿರುವುದಾಗಿ ಶ್ರೀಲಂಕಾದ ದಿನಪತ್ರಿಕೆಯೊಂದು ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!