ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಸಂದರ್ಭದಲ್ಲಿ ಹಿಂದಿನ ಸರಕಾರ ನೇಮಿಸಿದ್ದ ಮ್ಯಾಜಿಸ್ಟ್ರೇಟ್ ಪೊಲೀಸರು ತೆಗೆದುಕೊಂಡ ಕ್ರಮ ಸರಿಯಾಗಿದೆ ಎಂದು ವರದಿ ನೀಡಿತ್ತು. ಈ ವರದಿಯನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಯಥವಾತ್ತಾಗಿ ಒಪ್ಪಿಕೊಂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ನಮ್ಮ ಸರ್ಕಾರ ತೆಗೆದುಕೊಂಡಿರುವ ಕ್ರಮ ಸರಿಯಾಗಿದೆ ಎಂದಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಜೆ ಹಳ್ಳಿ ಹಳ್ಳಿ ಗಲಭೆ ವಿಚಾರದಲ್ಲಿ ನೇಮಿಸಿದ್ದ ಅಧಿಕಾರಿಯ ರಿಪೋರ್ಟ್ ಬಂದಿದೆ. ರಾಜ್ಯ ಸರ್ಕಾರ ಯತಾವತ್ತಾಗಿ ಒಪ್ಪಿಕೊಂಡಿದ್ದಾರೆ.ಇದು ಸರಿಯಾದ ಕ್ರಮ. ಹಿಂಸೆ, ಪೊಲೀಸರ ಮೇಲೆ ದಾಳಿ, ಕಾನೂನು ಸುವ್ಯವಸ್ಥೆ ಕಾಪಾಡಲು ತೆಗೆದುಕೊಂಡ ಕ್ರಮವಾಗಿದೆ. ಅಂದಿನ ಘಟನೆ ಎಲ್ಲವೂ ಕೂಡ ಮಾಧ್ಯಮದಲ್ಲಿ ಸ್ಪಷ್ಟವಾಗಿ ಬಂದಿತ್ತು. ಕಾಂಗ್ರೆಸ್ ಪಕ್ಷದ ಶಾಸಕರ ಮನೆ ಮೇಲೆ ದಾಳಿಯಾದರೂ ಕೂಡ. ಅವರ ರಕ್ಷಣೆಗೆ ಬರಲಿಲ್ಲ ಗೋಲೀಬಾರ್ ಪ್ರಶ್ನಿಸುವ ಕೆಲಸ ಮಾಡಿದರು.
ಈಗ ಸತ್ಯ ಹೊರ ಬಂದಿದೆ. ಸರ್ಕಾರ ಅದನ್ನ ಒಪ್ಪಿಕೊಂಡಿದೆ ಎಂದರು.
ಪೊಲೀಸ್ ಠಾಣೆ ಮೇಲೆ ದಾಳಿ ಮಾಡುವುದು ಅಕ್ಷಮ್ಯ ಅಪರಾಧ. ಆದ್ದರಿಂದ ಈ ರೀತಿಯ ಘಟನೆ ಮರುಕಳಿಸಬಾರದು. ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಯಾಗಿರುವುದಕ್ಕೆ ಪರಿಹಾರಕ್ಕೆ ಕಮಿಷನ್ ನೇಮಕ ಮಾಡಿದ್ದೆವು. ಅದರ ಶಿಫಾರಸು ಕೂಡ ಸರ್ಕಾರ ಮಾಡಿ. ಸಾರ್ವಜನಿಕ ಆಸ್ತಿ ಕಟ್ಟಿಕೊಡುವ ಕೆಲಸ ಮಾಡಬೇಕು ಎಂದರು.
ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿದ್ದರು ಎಂದು ಕಾಂಗ್ರೆಸ್ ನವರು ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಎಲ್ಲಾ ವಿಚಾರಗಳು ಮಾಧ್ಯಮದಲ್ಲಿ ಲೈವ್ ಆಗಿ ನೋಡಿದ್ದಾರೆ. ಯಾವುದೇ ಸಮುದಾಯ ಟಾರ್ಗೆಟ್ ಮಾಡುವ ಕೆಲಸ ಮಾಡಿಲ್ಲ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ರೆಕಾರ್ಡ್ಸ್ ಸುಟ್ಟು ಹಾಕುವ ಕೆಲಸ ಮಾಡಿದ್ದರು. ಅವರದ್ದೇ ಪಕ್ಷದ ಶಾಸಕನ ರಕ್ಷಣೆಗೆ ಬರಲಿಲ್ಲ. ಎಂದರು.