ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸೋಮವಾರದ ವರೆಗೆ ಸರಕಾರಕ್ಕೆ ಗಡುವು, ಬಳಿಕ ಜೈಲು ಭರೋ ಚಳವಳಿ ಮಾಡ್ತೇವೆ: ಕೋಡಿಹಳ್ಳಿ ಚಂದ್ರಶೇಖರ್

ಹೊಸದಿಗಂತ ಆನ್ ಲೈನ್ ಡೆಸ್ಕ್:

6ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವಂತೆ 11 ದಿನಗಳಿಂದ ಮುಷ್ಕರ ಮಾಡಿದರು ಸರ್ಕಾರ ತಿರಸ್ಕಾರ ಮಾಡುತ್ತಿದೆ. ಆದ್ದರಿಂದ ರಾಜ್ಯಪಾಲರಿಗೆ ಸರ್ಕಾರದ ಧೋರಣೆ ವಿರುದ್ಧ ಪತ್ರವನ್ನು ನೀಡಲು ಸಿದ್ಧತೆ ಮಾಡಿದ್ದೇವೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಬೆಂಗಳೂರುನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ಸಮಸ್ಯೆಗಳ‌ ಬಗ್ಗೆ ರಾಜ್ಯಪಾಲರಿಗೆ ಮನವಿ ಪತ್ರ ಕೊಡುತ್ತೇವೆ. ಈ ವಿಚಾರದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ ಸರ್ಕಾರಕ್ಕೆ ತಿದ್ದಿ ಬುದ್ಧಿ ಹೇಳಬೇಕು. 11 ದಿನ ಸತ್ಯಾಗ್ರಹ ಮಾಡಿದ್ರು ಸರ್ಕಾರ ತಿರಸ್ಕಾರ ಮಾಡುತ್ತಿದೆ. ನೌಕರರನ್ನು ಅಮಾನತು ಮಾಡಿ, ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿ ಸಾವಿನ ದವಡೆಗೆ ತಳ್ಳುತ್ತಿದೆ ಎಂದು ಆರೋಪಿಸಿದರು.
ಕೊರೋನಾ ನೆಪವೊಡ್ಡಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಯಾವುದೇ ಕಾರಣ ಕೊಡದೆ ಕೆಲ ನೌಕರರನ್ನು ಬಂಧನ ಮಾಡುತ್ತಿದ್ದಾರೆ. ಸೋಮವಾರದವರೆಗೂ ನೋಡಿ.. ತೀವ್ರ ಚಳವಳಿಗೆ ಧುಮುಕುತ್ತೇವೆ. ಸೋಮವಾರ ನಂತರ ಜೈಲ್ ಭರೋ ಚಳವಳಿ ಮಾಡುತ್ತೇವೆ. ಜೈಲಿಗೆ ಹೋಗಲು ಒಂದು ಲಕ್ಷ ಜನ ನೌಕರರು ಕರೆ ಕೊಡಿ ಎಂದು ಹೇಳುತ್ತಿದ್ದಾರೆ. ನೌಕರರು ಮನೆಯಲ್ಲಿ ಇರಲು ಅಧಿಕಾರಿಗಳು ಬಿಡುತ್ತಿಲ್ಲ. ಸೋಮವಾರದವರೆಗೆ ಸರ್ಕಾರಕ್ಕೆ ಗಡುವು ನೀಡುತ್ತಿದ್ದು, ಸೋಮವಾರದ ನಂತರ ಜೈಲು ಬರೋ ಚಳವಳಿ ಮಾಡ್ತೇವೆ. ಕುಟುಂಬ ಸಮೇತರಾಗಿ 1,33,000 ನೌಕರರು ಜೈಲು ಬರೋ ಚಳವಳಿ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss