ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಲಡಾಖ್ ಕೇಂದ್ರಾಡಳಿತ ಮಹತ್ವದ ನಿರ್ಧಾರವನ್ನು ಕೈಕೊಂಡಿದ್ದು, ಎಲ್ಲ ಸರ್ಕಾರಿ ಉದ್ಯೋಗಗಳನ್ನು ಸ್ಥಳೀಯರಿಗೆ ಮಾತ್ರ ಮೀಸಲಿರಿಸಿದೆ.
ಈ ಕುರಿತು ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ಆರ್.ಕೆ.ಮಾಥುರ್ ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ.
ಸ್ಥಳೀಯರ ವ್ಯಾಪ್ತಿಯಲ್ಲಿ ಯಾರೆಲ್ಲ ಬರಲಿದ್ದಾರೆ ಎಂಬುದರ ಬಗ್ಗೆ ಮಾನದಂಡ ಇನ್ನಷ್ಟೇ ಸಿದ್ಧಪಡಿಸಬೇಕಿದ್ದು, ಆದರೂ ಅಧಿಸೂಚನೆ ಹೊರಡಿಸಿದ ಕೂಡಲೇ ಹೊಸ ನಿಯಮ ಜಾರಿಗೆ ಬರಲಿದೆ.
ಲಡಾಖ್ನ ನಿವಾಸಿಯಲ್ಲದವರನ್ನು ಸೇವೆಗೆ ಪರಿಗಣಿಸಲಾಗುವುದಿಲ್ಲ ಎಂದು 2021ರ ಲಡಾಖ್ ಕೇಂದ್ರಾಡಳಿತ ಪ್ರದೇಶ ಸೇವಾ ನೇಮಕಾತಿ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.ಆದಾಗ್ಯೂ, 2019ರ ಜಮ್ಮು-ಕಾಶ್ಮೀರ ಪುನರ್ ಸಂಘಟನೆ ಕಾಯ್ದೆಯ ಅಡಿ ಸೇವೆಗೆ ನೇಮಕವಾದವರಿಗೆ ಈ ನಿಯಮ ಅನ್ವಯವಾಗುವುದಿಲ್ಲ ಎಂದು ಹೊಸ ನಿಯಮದಲ್ಲಿ ಉಲ್ಲೇಖಿಸಲಾಗಿದೆ.
2011ರ ಜನಗಣತಿ ಪ್ರಕಾರ, ಲೇಹ್ ಮತ್ತು ಕಾರ್ಗಿಲ್ ಪ್ರದೇಶಗಳನ್ನೊಳಗೊಂಡ ಲಡಾಖ್ನ ಜನಸಂಖ್ಯೆ ಸುಮಾರು 2.7 ಲಕ್ಷ. ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ 2019ರ ಆಗಸ್ಟ್ 5ರಿಂದ ಅಸ್ತಿತ್ವಕ್ಕೆ ಬಂದಿದೆ.