spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸರ್ಕಾರ ಕೊಡಗು ಮತ್ತು ಕೊಡವರನ್ನು ನಿರ್ಲಕ್ಷ್ಯ ಮಾಡಿದೆ: ಕೊಡವಾಮೆರ ಕೊಂಡಾಟ ಸಂಘಟನೆ ತೀವ್ರ ಅಸಮಾಧಾನ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಕೊಡಗು:

ಕರ್ನಾಟಕ ಸರ್ಕಾರವು ಕೊಡಗು ಮತ್ತು ಕೊಡವರಿಗೆ ಪದೇ ಪದೆ ವಂಚಿಸುತಿದ್ಧು, ಈ ಬಾರಿಯೂ ಕೊಡಗಿಗೆ ಸಚಿವ ಸ್ಥಾನ ನೀಡದೆ ತನ್ನ ಮಲತಾಯಿ ಧೋರಣೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಎಂದು ಕೊಡವಾಮೆರ ಕೊಂಡಾಟ (ರಿ) ಸಂಘಟನೆ ತೀವ್ರ ಅಸಮಾಧಾನ ಹೊರಹಾಕಿದೆ.

ಈ ಕುರಿತು ಹೇಳಿಕೆ ನೀಡಿರುವ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಮತ್ತು ಪದಾಧಿಕಾರಿಗಳು, ಕೊಡಗು ರಾಜ್ಯದಲ್ಲಿಯೇ ವಿಭಿನ್ನ ಭೌಗೋಳಿಕ ಹಾಗೂ ಪಾರ್ಕೃತಿಕ ಹಿನ್ನೆಲೆಯ ಜಿಲ್ಲೆಯಾಗಿದ್ದು ಇಲ್ಲಿಗೆ ಯಾವತ್ತೂ ವಿಶೇಷ ಸ್ಥಾನಮಾನದ ಅವಶ್ಯಕತೆ ಇದೆ. ಅಲ್ಲದೆ ಕಳೆದ ಹಲವು ವರ್ಷಗಳಿಂದ ಸತತ ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿ ನಲುಗಿ ಹೋಗಿದೆ. ಸ್ಥಳೀಯ ಶಾಸಕರು ಉಸ್ತುವಾರಿ ಸಚಿವರಾದರೆ ಮಾತ್ರ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಲು ಸಾಧ್ಯವಿದೆ.

ಆದರೆ ಕರ್ನಾಟಕ ಸರ್ಕಾರವು ಪದೇ ಪದೇ ಜಿಲ್ಲೆಯ ಕುರಿತು ಕಿಂಚಿತ್ತೂ ಅರಿವಿಲ್ಲದ ಹೊರಜಿಲ್ಲೆಯವರನ್ನ ಉಸ್ತುವಾರಿಗಳಾಗಿ ನೇಮಿಸುತಿದ್ದು ಕೊಡಗು ಮತ್ತಷ್ಟು ಹಿಂದುಳಿಯುತ್ತಿದೆ.

ಶಾಸಕ ಮಂಡೆಪಂಡ ಅಪ್ಪಚ್ಚು ರಂಜನ್ ಅವರಿಗೆ ಹಿರಿತನ, ಜಾತಿ, ಇಲ್ಲವೇ ಪ್ರದೇಶಿಕ ಆಧಾರದಲ್ಲಿ ಈ ಬಾರಿ ಸಚಿವ ಸ್ಥಾನ ನೀಡುವ ನಿರೀಕ್ಷೆ ಇತ್ತು. ಆದರೆ ಸರ್ಕಾರ ನಿರ್ಲಕ್ಷಿಸಿ, ನಿಷ್ಟೆ ಹಾಗೂ ತಾಳ್ಮೆಯಿಂದಿರುವ ಕೊಡಗಿನ ಜನತೆಗೆ ಅವಮಾನ ಮಾಡಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss