ದಿಗಂತ ವರದಿ ಬೀದರ :
ಕೋವಿಡ್ ಸಾವುಗಳನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಅದು ನಿಜವಲ್ಲ. ಸಾವಿನ ನಿಜವಾದ ಮಾಹಿತಿಯನ್ನು ಮಾತ್ರ ನೀಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ ಹೇಳಿದರು.
ಪತ್ರಕರ್ತರೊಡನೆ ಮಾತನಾಡುತ್ತಿದ್ದ ಅವರು, ಕೊರೋನಾ ಚೈನ್ ಬ್ರೇಕ್ ಮಾಡಲು 14 ದಿನಗಳ ಸಮಯ ಬೇಕು ಹಾಗೂ ಜನರ ಸಹಕಾರ ಬೇಕು. ಅದಕ್ಕಾಗಿ ಸರ್ಕಾರ ಕರ್ಫ್ಯೂ ವಿಧಿಸಿದೆ ಎಂದರು.
ನಾಳೆಯಿಂದ 18 ವರ್ಷದವರಿಗೆ ಲಸಿಕೆ ಪ್ರಾರಂಭಿಸಲಾಗುವುದು ಆದರೆ ಲಸಿಕೆ ಸರಬರಾಜು ಮಾಡುವ ಸಂಸ್ಥೆಗಳು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ ಅಲ್ಲಿಯತನಕ ಯಾರೂ ಲಸಿಕೆಗಾಗಿ ಆಸ್ಪತ್ರೆಗೆ ಹೋಗಬೇಡಿ ಎಂದ ಅವರು ಬೆಂಗಳೂರಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ 260 ಆಕ್ಸಿಜನ್ ಬೆಡ್ ಗಳನ್ನು ಆರಂಭ ಮಾಡಿದ್ದೇವೆ ಎಂದು ತಿಳಿಸಿದರು.