Friday, June 2, 2023

Latest Posts

ಎಚ್‌ಎಎಲ್‌ನ ಶೇ.3.5ರಷ್ಟು ಷೇರುಗಳನ್ನು ಮಾರಾಟ ಮಾಡಲು ಮುಂದಾದ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತವು ತನ್ನ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಯಾದ ಹಿಂದೂಸ್ತಾನ್ ಏರೋನಾಟಿಕ್ಸ್ (HAL) ನಲ್ಲಿ 3.5 ಶೇಕಡಾದಷ್ಟು ಪಾಲನ್ನು ಆಫರ್ ಫಾರ್ ಸೇಲ್ (OFS) ಮೂಲಕ ಮಾರಾಟ ಮಾಡಲಿದೆ. ಆಫರ್ ಮಾರ್ಚ್ 23 ರಂದು ತೆರೆಯುತ್ತದೆ ಮತ್ತು ಮಾರ್ಚ್ 24 ರವರೆಗೆ ಮುಂದುವರಿಯುತ್ತದೆ. 3.5 ಶೇಕಡಅದಲ್ಲಿ ಮೂಲ ಕೊಡುಗೆಯಾಗಿ 1.75 ಶೇ. ಮತ್ತು ಹೆಚ್ಚುವರಿ ಆಯ್ಕೆಯಾಗಿ 1.75ಶೇ.ಗಳು ಮಾರಾಟವಾಗಲಿವೆ. ಈ ವಹಿವಾಟಿನ ಮೂಲಕ 2,867 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಸಂಗ್ರಹಿಸಲು ಸರ್ಕಾರ ಪ್ರಯತ್ನಿಸುತ್ತಿದೆ.

ನಿಯಂತ್ರಕ ಫೈಲಿಂಗ್ ಪ್ರಕಾರ, ಭಾರತ ಸರ್ಕಾರವು HAL ನಲ್ಲಿ OFS ಮೂಲಕ 58,51,782 ಈಕ್ವಿಟಿ ಷೇರುಗಳನ್ನು ಅಥವಾ 1.75 ಶೇಕಡಾದಷ್ಟನ್ನು ಮೂಲ ಕೊಡುಗೆಯಾಗಿ ಮಾರಾಟ ಮಾಡಲು ಪ್ರಸ್ತಾಪಿಸಿದೆ. ಕಂಪನಿಯ ಪ್ರತಿ ಷೇರಿನ ಮುಖಬೆಲೆ 10 ರೂ.ಗಳಷ್ಟಿದೆ. ಇದಲ್ಲದೆ ಮತ್ತೊಂದು 1.75ಶೇ. ಅಥವಾ 58,51,781 ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲು ಕೇಂದ್ರವು ಓವರ್‌ಸಬ್‌ಸ್ಕ್ರಿಪ್ಶನ್ ಆಯ್ಕೆಯನ್ನು ಹೊಂದಿದೆ. ಮೂಲ ಗಾತ್ರ ಮತ್ತು ಓವರ್‌ಸಬ್‌ಸ್ಕ್ರಿಪ್ಶನ್ ಆಯ್ಕೆಯನ್ನು ಪರಿಗಣಿಸಿ, ಕೇಂದ್ರವು ಒಟ್ಟಾರೆ 11,703,563 ಇಕ್ವಿಟಿ ಷೇರುಗಳನ್ನು ಮಾರಾಟ ಮಾಡಲು ಯೋಜಿಸಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!