Wednesday, August 10, 2022

Latest Posts

ಕೆರೂರು ಏತ ನೀರಾವರಿ ಯೋಜನೆಗೆ ಸರ್ಕಾರದಿಂದ ಅನುಮೋದನೆ: ಬಾದಾಮಿ ಕ್ಷೇತ್ರದ ಬಹುದಿನಗಳ ಕನಸು ನನಸು

ಹೊಸ ದಿಗಂತ ವರದಿ, ಬಾಗಲಕೋಟೆ:

ಮಹತ್ವಾಕಾಂಕ್ಷೆಯ ಕೆರೂರು ಏತ ನೀರಾವರಿ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಇದರೊಂದಿಗೆ ಬಾದಾಮಿ
ಕ್ಷೇತ್ರದ ಬಹುದಿನಗಳ ಕನಸು ನನಸಾಗಿದೆ.
ಯೋಜನೆಗೆ ಜಾರಿಗೆ ತರಲು ಶ್ರಮಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯ ಅವರಿಗೆ ತಾಲೂಕಿನ ಜನತೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕೆರೂರು ಏತ ನೀರಾವರಿ ಯೋಜನೆಯನ್ನು 2019-20ನೇ ಸಾಲಿನ ಬಜೆಟ್‍ನಲ್ಲಿ ಘೋಷಿಸಲಾಗಿತ್ತು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಜಲ ಸಂಪನ್ಮೂಲ ಇಲಾಖೆಯ ಹಿಂದಿನ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರ ಮೇಲೆ ಒತ್ತಡ ತಂದಿದ್ದರ ಪರಿಣಾಮ 525 ಕೋಟಿ ರೂ. ವೆಚ್ಚದ ಯೋಜನೆಗೆ ಸರ್ಕಾರ ಇದೀಗ ಮಂಜೂರಾತಿ ನೀಡಿದೆ. ಇದಕ್ಕಾಗಿ ಕ್ಷೇತ್ರದ ಜನತೆಯ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ 2 ಟಿಎಂಸಿ ನೀರು ಎತ್ತಿ ನೀರಾವರಿಗೆ ಒಳಪಡಿಸುವುದು ಯೋಜನೆಯ ಉದ್ದೇಶ. ಇದರಿಂದ ಬಾದಾಮಿ ಮತ್ತು ಬೀಳಗಿ ಕ್ಷೇತ್ರದ 16 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ.
ಯೋಜನೆಗೆ ಮೊದಲ ಹಂತದಲ್ಲಿ 310, ಎರಡನೇ ಹಂತದಲ್ಲಿ 110 ಹಾಗೂ ಮೂರನೇ ಹಂತದಲ್ಲಿ 105 ಕೋಟಿ ರೂ.ಗಳ ಅನುದಾನ ಒದಗಿಸುವುದಾಗಿ ಸರ್ಕಾರ ತನ್ನ ಆದೇಶ ಪತ್ರದಲ್ಲಿ ತಿಳಿಸಿದೆ.
ಬಾದಾಮಿಯ ಹಲವಾರು ಗ್ರಾಮಗಳು ಮಳೆಯ ತೀವ್ರ ಅಭಾವ ಎದುರಿಸುತ್ತಿದ್ದಾರೆ. ಸದಾ ಬರಗಾಲಕ್ಕೆ ತುತ್ತಾಗುವ ಈ ಗ್ರಾಮಗಳ ರೈತರು ಮಳೆ ಇಲ್ಲದೆ, ಬೆಳೆ ಕಾಣದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕೆರೂರು ಏತ ನೀರಾವರಿ ಯೋಜನೆ ಜಾರಿಗೆ ತರಲು ಶ್ರಮಿಸುವುದಾಗಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ನುಡಿದಂತೆ ನಡೆದಿರುವ ಸಿದ್ದರಾಮಯ್ಯ ಅವರು ನೀಡಿರುವ ಈ ಕೊಡುಗೆ ಕ್ಷೇತ್ರಕ್ಕೆ ವರದಾನ ಎಂದು ಜನತೆ ಬಣ್ಣಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss