Wednesday, June 29, 2022

Latest Posts

ಮತಾಂತರ ನಿಷೇಧ ಮಸೂದೆ ಮಂಡನೆ‌ ಸರಕಾರದ ದಿಟ್ಟ ಹೆಜ್ಜೆ: ಕೊಡಗು ಜಿಲ್ಲಾ ಬಿಜೆಪಿ ಶ್ಲಾಘನೆ

ದಿಗಂತ ವರದಿ ಮಡಿಕೇರಿ:

ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ಮಸೂದೆಯನ್ನು ಶಾಸನ ಸಭೆಯಲ್ಲಿ ಮಂಡಿಸುವ ಮೂಲಕ ರಾಜ್ಯ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಹರ್ಷ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಾವುದೇ ವ್ಯಕ್ತಿ ತನಗಿಷ್ಟವಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳಲು ಮುಕ್ತ.

ಆದರೆ ಬಲವಂತ ಮತ್ತು ವಂಚನೆಗಳ ಮೂಲಕ ಮತಾಂತರ ಕಾನೂನಿ ನ ಅಡಿ ಅಪರಾಧ. ಬಲವಂತದ ಮತಾಂತರ ಜಾಮೀನು ರಹಿತ ಅಪರಾಧ ಮತ್ತು ಮತಾಂತರ ಸಾಬೀತಾದರೆ ಮತಾಂತರ ಮಾಡಿದ ವ್ಯಕ್ತಿಯಿಂದ ಮತಾಂತರಗೊಂಡ ವ್ಯಕ್ತಿ 5ಲಕ್ಷ ರೂ.ವರೆಗೆ ಪರಿಹಾರ ಪಡೆಯುವ ಅವಕಾಶ, ವಿವಾಹದ ಆಮಿಷವೊಡ್ಡಿ ಮತಾಂತರ ಮಾಡಿ ಮದುವೆಯಾಗಿದ್ದರೆ ಆ ವಿವಾಹ ಅಸಿಂಧು, ಪರಿಶಿಷ್ಟ ಜಾತಿ-ಪಂಗಡಕ್ಕೆ ಸೇರಿದ ವ್ಯಕ್ತಿಗಳು,ಅಪ್ರಾಪ್ತರು ಮಹಿಳೆಯರು ಬುದ್ದಿ ಮಾಂದ್ಯರು ಸೇರಿ ದುರ್ಬಲ ವರ್ಗಗಳ ಬಲವಂತ ದ ಮತಾಂತರಕ್ಕೆ 3 ರಿಂದ 10ವರ್ಷ ಗಳ ಜೈಲು ಮತ್ತು 1ಲಕ್ಷದ ವರೆಗೂ ದಂಡ, ಶಿಕ್ಷಣ ಸಂಸ್ಥೆ ಅನಾಥಾಶ್ರಮ, ವೃದ್ಧಾಶ್ರಮ, ಆಸ್ಪತ್ರೆ, ಧಾರ್ಮಿಕ ಮಿಶನರಿಗಳು, ಎನ್ ಜಿ ಒಗಳು ಇಂತಹ ಕೃತ್ಯಗಳಲ್ಲಿ ಭಾಗಿಯಾದರೆ ಸರ್ಕಾರದ ಅನುದಾನ ಸ್ಥಗಿತ ಸೇರಿದಂತೆ ಈ ರೀತಿಯ ಕರಡಿನ ಸಾರಾಂಶ ಹೊಂದಿರುವ ಈ ಮಸೂದೆಯಿಂದ ದುರ್ಬಲ ವರ್ಗ, ಹಾಡಿಗಳಲ್ಲಿರುವ ಜನತೆ ಮತ್ತು ಮತಾಂತರ ಮಾಡುವುದಕ್ಕಾಗಿಯೇ ಲವ್ ಜಿಹಾದ್ ಮೂಲಕ ಅಮಾಯಕ ಹೆಣ್ಣು ಮಕ್ಕಳ ಬಾಳಿಗೆ ಕೊಳ್ಳಿ ಇಡುವಂತಹ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸರ್ಕಾರ ಮುಂದಾಗಿರುದುವುದು ನಿಜಕ್ಕೂ ಸಂತೋಷದ ವಿಚಾರ ಎಂದು ಮಹೇಶ್ ಜೈನಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ತಮ್ಮ ತಾಯಿಯೇ ಮತಾಂತರಗೊಂಡಿದ್ದಾರೆ ಎಂದು ಶಾಸಕರೊಬ್ಬರು ಇತ್ತೀಚಿಗೆ ವಿಧಾನ ಸಭೆಯಲ್ಲಿ ಅಳಲನ್ನು ತೋಡಿ ಕೊಂಡಿರಿವುದು ಕೂಡಾ ಇತ್ತೀಚಿನ ದಿನಗಳಲ್ಲಿ ಮತಾಂತರ ಮಾಡುವವರ ಕರಾಳ ಬಾಹು ಎಷ್ಟು ವಿಸ್ತಾರವಾಗಿದೆ ಎಂಬುದನ್ನು ತೋರಿಸುತ್ತಿದೆ ಎಂದಿರುವ ಜೈನಿ ಅವರು, ಈ ವಿಚಾರದಲ್ಲಿ ವಿರೋಧ ಪಕ್ಷಗಳು ತಮ್ಮ ಜವಾಬ್ದಾರಿ ಮರೆತು ವರ್ತಿಸುತ್ತಿವೆ ಎಂದು ಅವರು ಜರಿದಿದ್ದಾರೆ.

ಈ ಕಾಯ್ದೆ ದುರ್ಬಲ ವರ್ಗ ಮತ್ತು ಅಮಾಯಕ ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರ ಬದ್ಧ ಎಂಬ ಸಂದೇಶವನ್ನು ಸಾರಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ. ಅಲ್ಲದೆ ಈ ಕಾಯ್ದೆಯನ್ನು ಕೊಡಗು ಜಿಲ್ಲಾ ಬಿಜೆಪಿ ಸ್ವಾಗತಿಸುವುದಾಗಿಯೂ ಮಹೇಶ್ ಜೈನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss