Wednesday, August 17, 2022

Latest Posts

“ಅಪ್ಪು ಹುಟ್ಟಿನಿಂದಲೇ ಪ್ರತಿಭಾವಂತ”: ಪುನೀತ್ ಅಂತಿಮ ದರ್ಶನ ಪಡೆದ ರಾಜ್ಯಪಾಲ ಗೆಹ್ಲೋಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್ ವುಟ್ ನಟ ಪುನೀತ್ ರಾಜಕುಮಾರ್ ಅಂತಿಮ ದರ್ಶನಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಅಭಿಮಾನಿ ಬಳಗವೇ ಹರಿದು ಬರುತ್ತಿದೆ. ಇದರ ನಡುವೆ  ರಾಜ್ಯಪಾಲ ಟಿ.ಸಿ.ಗೆಹ್ಲೋಟ್, ಸಿಎಂ ಬೊಮ್ಮಾಯಿ, ಸಚಿವ ಆರಗ ಜ್ಞಾನೇಂದ್ರ ಕೂಡ ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.

ಈ ಸಮಯದಲ್ಲಿ ರಾಜ್ಯಪಾಲರು ಮಾತನಾಡಿದ್ದು, “ಹಿಂದೂಸ್ತಾನ ಹಾಗೂ ಸಿನಿಮಾ ಜಗತ್ತಿನಲ್ಲಿ ಖ್ಯಾತಿ ಪಡೆದಿದ್ದ ‘ಪುನೀತ್ ರಾಜಕುಮಾರ್ ನಮ್ಮ ನಡುವೆ ಇಲ್ಲ. ಪುನೀತ್ ಹುಟ್ಟುತ್ತಲೇ ಪ್ರತಿಭಾವಂತನಾಗಿದ್ದ. ಬಾಲ್ಯದಿಂದಲೇ ಸಿನಿಮಾ ಜಗತ್ತಿನಲ್ಲಿ ತನ್ನ ಪ್ರತಿಭೆ ತೋರಿಸಿ, ಪ್ರಶಸ್ತಿ ಪುರಸ್ಕಾರ ಕೂಡ ತನ್ನದಾಗಿಸಿಕೊಂಡಿದ್ದ” ಎಂದರು.

“ಸಿನಿಮಾ ಜಗತ್ತನ್ನು ಹೊರತುಪಡಿಸಿ ಪುನೀತ್ ಸಾಮಾಜಿಕ ಸೇವೆಯಲ್ಲಿಯೂ ಸಕ್ರಿಯರಾಗಿದ್ದರು. ಪುನೀತ್ ಅಗಲಿಕೆ ಸಿನಿಮಾ ಜಗತ್ತಿಗೆ ತುಂಬಲಾರದ ನಷ್ಟ. ಸದಾ ಯುವ ಜನತೆಯ ಹೃದಯದಲ್ಲಿ ಉಳಿದಿರುತ್ತಾರೆ. ರಾಜ್ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ” ಎಂದು ಸಂತಾಪ ಸೂಚಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!