ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಮಜೀನ್ ಎಂಬಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಭೂಮಿ ಪೂಜೆಯನ್ನು ಇಂದು ಜಮ್ಮು ಕಾಶ್ಮೀರದ ರಾಜ್ಯಪಾಲ ಮನೋಜ್ ಸಿನ್ಹಾ ಅವರು ನೆರವೇರಿಸಿದರು.
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕಮಿಟಿಯ ಅಧ್ಯಕ್ಷ ವೈ.ವಿ ಸುಬ್ಬ ರೆಡ್ಡಿ ಹಾಗೂ ರಾಜ್ಯಪಾಲ ಮನೋಜ್ ತಿವಾರಿ ಅವರೊಂದಿಗೆ ಟಿಟಿಡಿ ಬೋರ್ಡ್ನ 58 ಸದಸ್ಯರು, ಆಂಧ್ರ ಪ್ರದೇಶದ ಸಂಸತ್ ಸದಸ್ಯರು ಹಾಗೂ ಮಾಜಿ ಐಎಎಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ 12 ವಿಶೇಷ ಮಂದಿ ವಿಶೇಷ ಆಹ್ವಾನ ನೀಡಲಾಗಿತ್ತು ಎಂಬ ಮಾಹಿತಿ ಲಭಿಸಿದೆ.
ದೇವಾಲಯ ನಿರ್ಮಾಣಕ್ಕಾಗಿ ಟ್ರಸ್ಟ್ 62 ಎಕರೆ ಪ್ರದೇಶವನ್ನು ಖರೀದಿ ಮಾಡಿದ್ದು, ಮೊದಲ ಹಂತದಲ್ಲಿ 17 ಎಕರೆ ಪ್ರದೇಶದಲ್ಲಿ ಮೊದಲ ಹಂತದ ನಿರ್ಮಾಣ ಕಾರ್ಯ ನಡೆಯಲಿದೆ. ಮೊದಲ ಹಂತದಲ್ಲಿ ದೇವಾಲಯ ಸಂಕೀರ್ಣ, ಬೌಂಡರಿ ವಾಲ್, ವೇದಿಕ್ ಶಾಲೆ, ಸಿಬ್ಬಂದಿಯ ವಸತಿ ಸಮುಚ್ಚಯ ಹಾಗೂ ಯಾತ್ರಿಕರ ಅಗತ್ಯವಿರುವ ಸೌಲಭ್ಯಗಳು ನಿರ್ಮಾಣವಾಗಲಿದೆ. ಮೊದಲ ಹಂತದ ಕಾಮಗಾರಿಗೆ 33 ಕೋಟಿ ರೂಪಾಯಿ ವೆಚ್ಚವನ್ನು ಅಂದಾಜು ಮಾಡಲಾಗಿದೆ.
Much-awaited Bhoomi Pujan ceremony of Sri Venkateswara Swamy Temple by Tirumala Tirupati Devasthanams (TTD) at Majeen, Jammu held today. pic.twitter.com/vl5UOlHgiO
— Office of LG J&K (@OfficeOfLGJandK) June 13, 2021