spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನ. 26ರಂದು ಬಿಗ್ ಬಾಸ್ ಕವಿತಾ ಗೌಡ ನಟನೆಯ ‘ಗೋವಿಂದ ಗೋವಿಂದ’ ಚಿತ್ರ ಬಿಡುಗಡೆ

- Advertisement -Nitte

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:

ಸುಮಂತ್ ಶೈಲೇಂದ್ರ, ಭಾವನಾ ಮೇನನ್, ಬಿಗ್‌ ಬಾಸ್‌ ಕವಿತಾ ಗೌಡ ಒಟ್ಟಿಗೆ ನಟಿಸಿರುವ ‘ಗೋವಿಂದ ಗೋವಿಂದ’ ಚಿತ್ರ ತೆರೆ ಮೇಲೆ ಬರೋದಕ್ಕೆ ಸಿದ್ಧವಾಗಿದೆ. ಇದೇ ನವೆಂಬರ್‌ 26 ರಂದು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ  ಚಿತ್ರವನ್ನು ತಿಲಕ್‌ ಅವರು ನಿರ್ದೇಶನ ಮಾಡಿದ್ದು, ಶೈಲೇಂದ್ರ ಪ್ರೊಡಕ್ಷನ್ಸ್, ಎಲ್.ಜಿ. ಕ್ರಿಯೇಷನ್ಸ್, ರವಿ ಗರಣಿ ಪ್ರೊಡಕ್ಷನ್ಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಚಿತ್ರದ ಮೊದಲ ಅರ್ಧ ಭಾಗ ಹಾಸ್ಯದಿಂದ ಕೂಡಿದ್ದು, ಎರಡನೆಯ ಭಾಗ ಥ್ರಿಲ್ಲರ್‌ಗೆ ತಿರುಗಿ ಹಾಸ್ಯದಲ್ಲಿ ಕೊನೆಗೊಳ್ಳುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಚಿಂತಾಮಣಿ, ವಿಜಯಪುರ ಹಾಗೂ ಮಧುಗಿರಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಚಿತ್ರೀಕರಣ ನಡೆದಿದ್ದು, 6 ಹಾಡುಗಳ ಜೊತೆಗೆ ಎರಡು ಬಿಟ್‌ ಸಾಂಗ್‌ಗಳಿವೆ. “ಇದೊಂದು ಪ್ಯಾಕೇಜ್‌ ರೀತಿಯ ಸಿನಿಮಾ. ಇದರಲ್ಲಿ  ಹಾಸ್ಯ, ಥ್ರಿಲ್ಲರ್, ನೀತಿಕಥೆ ಇದೆ” ಎಂದು ಕವಿತಾ ಗೌಡಾ ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss