ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಕುನೋ ಉದ್ಯಾನವನದಲ್ಲಿ 9 ಚೀತಾಗಳು ಸಾವನ್ನಪ್ಪಿದ ಹಿನ್ನೆಲೆ ಉಳಿದ 15 ಚೀತಾಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಚಿಂತನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.
ಚೀತಾಗಳು ಬಹಳ ಸೂಕ್ಷ್ಮ. ಅದನ್ನು ನಾವು ಎಲ್ಲ ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ. ಈಗ ಮುಂಗಾರು ಸಮಯವಾಗಿರುವುದರಿಂದ ಸೋಂಕಿನಿಂದ ಚೀತಾಗಳು ಸಾವನ್ನಪ್ಪುತ್ತಿದೆ. ಇದನ್ನು ನಾವು ದಕ್ಷಿಣ ಆಫ್ರಿಕಾ ಹಾಗೂ ನಮೀಬಿಯಾದ ತಜ್ಞರೊಂದಿಗೂ ಹಂಚಿಕೊಂಡಿದ್ದೇವೆ. ನಾವು ಚೀತಾ ಯೋಜನೆಯನ್ನು ಯಶಸ್ವಿಗೊಳಿಸಲು ಸರ್ವಸನ್ನದ್ದರಾಗಿದ್ದೇವೆ ಎಂದರು.