ಗೋವುಗಳ ರಕ್ಷಣೆಗೆ ಪುಣ್ಯಕೋಟಿ ದತ್ತು ಯೋಜನೆ ಪ್ರಕಟಿಸಿದ ಸಿಎಂ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಜಾನುವಾರು ರಕ್ಷಣೆ ಸರಕಾರದ ಆದ್ಯತೆ. ರಾಜ್ಯದಲ್ಲಿ ನೂತನ 100 ಪಶು ಚಿಕಿತ್ಸಾಲಯಗಳ ಪ್ರಾರಂಭ. ಖಾಲಿ ಇರುವ 400 ಪಶು ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗಿದೆ.

ಗೋಶಾಲೆಗಳ ಸಂಖ್ಯೆ 31ರಿಂದ 100ಕ್ಕೆ ಹೆಚ್ಚಳ. ಇದಕ್ಕಾಗಿ 50 ಕೋಟಿ ರೂ. ನಿಗದಿ. ಗೋವುಗಳನ್ನು ದತ್ತು ಪಡೆಯಲು ನೂತನ ಗೋ ಪುಣ್ಯಕೋಟಿ ದತ್ತು ಯೋಜನೆ ಘೋಷಣೆ.

ಹಾವೇರಿ ಜಿಲ್ಲೆಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಪ್ರತ್ಯೇಕ ಜಿಲ್ಲಾ ಹಾಲು ಒಕ್ಕೂಟ ಸ್ಥಾಪನೆ.

ರಾಜ್ಯದ ಹಾಲು ಉತ್ಪಾದಕರಿಗೆ ಸಾಲ ಸೌಲಭ್ಯ ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಸರಳ ನಿಬಂಧನೆಯೊಂದಿಗೆ ಕ್ಷೀರ ಸಮೃದ್ಧಿ ಅಭಿವೃದ್ಧಿ ಸಹಕಾರ ಬ್ಯಾಂಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ರಾಜ್ಯ ಸರಕಾರದಿಂದ 100 ಕೋಟಿ ರೂ. ಶೇರು ಬಂಡವಾಳ ಘೋಷಣೆ. ಗೋಮಾತಾ ಸಹಕಾರ ಸಂಘಗಳ ಸ್ಥಾಪನೆ

ಸ್ಥಳೀಯ ತಳಿಗಳ ರಕ್ಷಣೆಗೆ ಕೆಎಂಎಫ್ ನಿಂದ ರೈತರಿಗೆ 2 ಸಾವಿರ ಗೋತಳಿಗಳ ಹಂಚಿಕೆ ಮಾಡಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!