Tuesday, July 5, 2022

Latest Posts

ಸೋಂಕಿತರ ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿದ್ದಾರೆ ಈ ಗ್ರಾ.ಪಂ. ಸದಸ್ಯರು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ,ಕೊಡಗು:

ದಾಖಲೆ ಸಂಖ್ಯೆಯ ಕೋವಿಡ್ ಸೋಂಕಿತರನ್ನು ಕಂಡಿದ್ದ ಕೊಡಗು ಜಿಲ್ಲೆಯ ಗ್ರಾಮೀಣ ಭಾಗಗಳ ಪರಿಸ್ಥಿತಿ ಪ್ರಸ್ತುತ ಸುಧಾರಣೆಯಾಗುತ್ತಿದೆ.
ಇದಕ್ಕೆ ಅಧಿಕಾರಿಗಳೊಂದಿಗೆ ಕೈಜೋಡಿಸಿದ ಗ್ರಾ.ಪಂ ಸದಸ್ಯರುಗಳು ಕೂಡ ಕಾರಣಕರ್ತರು.
ತಿಂಗಳ ಹಿಂದೆ ಅತಿಹೆಚ್ಚು ಸೋಂಕಿತರು ಪತ್ತೆಯಾಗುವ ಮೂಲಕ ಕೆ.ನಿಡುಗಣೆ ಗ್ರಾ.ಪಂ. ಆರೋಗ್ಯ ಕ್ಷೇತ್ರದ ಗಮನ ಸೆಳೆದಿತ್ತು. ಇದೀಗ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಇಲ್ಲಿನ ಸದಸ್ಯರುಗಳು ರಾತ್ರಿ, ಹಗಲೆನ್ನದೆ ಜೀವದ ಹಂಗು ತೊರೆದು ಗ್ರಾಮಸ್ಥರ ಆರೋಗ್ಯ ಕಾಪಾಡುವುದಕ್ಕಾಗಿ ಶ್ರಮಿಸುತ್ತಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಕರ್ಣಂಗೇರಿ ಗ್ರಾಮದ ಮನೆ ಮನೆಗಳಿಗೆ ಭೇಟಿ ನೀಡಿದ ಸದಸ್ಯರುಗಳಾದ ಜಾನ್ಸನ್ ಪಿಂಟೋ, ಪ್ರಮೀಳಾ, ಪುಷ್ಪಲತಾ, ಅನಿತಾ ಹಾಗೂ ಗ್ರಾಮದ ಆಶಾ ಕಾರ್ಯಕರ್ತೆ ಅನಿತಾ ರೈ ಅವರುಗಳು 52 ಸೋಂಕಿತರ ಆರೋಗ್ಯ ವಿಚಾರಿಸಿದರು.
ರಕ್ತದೊತ್ತಡ, ಮಧುಮೇಹ, ಶೀತ, ಜ್ವರ, ಆಕ್ಸಿಜನ್ ಪ್ರಮಾಣ, ಹೃದಯ ಬಡಿತ ಮತ್ತಿತರ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.
ಅನಾರೋಗ್ಯ ಪೀಡಿತರಿಗೆ ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡಲಾಯಿತು. ಕೋವಿಡ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳಿಗೆ ಧೈರ್ಯ ತುಂಬಲಾಯಿತು.
ಸದಸ್ಯರುಗಳಾದ ಜಾನ್ಸನ್ ಪಿಂಟೋ, ಪ್ರಮೀಳಾ ಹಾಗೂ ಪುಷ್ಪಲತಾ ಅವರುಗಳು ನರ್ಸಿಂಗ್ ತರಬೇತಿ ಹೊಂದಿರುವುದು ವಿಶೇಷ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss