ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ವಯಸ್ಸು ಕೇವಲ ಸಂಖ್ಯೆಯಷ್ಟೇ. ಅದು ನಮ್ಮ ಉತ್ಸಾಹಕ್ಕೆ ಅಡ್ಡಿಬರುವುದಿಲ್ಲ ಎಂಬ ಮಾತನ್ನು ಸಾಬೀತು ಮಾಡುವಂತಹ ಎಷ್ಟೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ನೋಡುತ್ತಿರುತ್ತೇವೆ. ಇದೀಗ ಅಂತಹದ್ದೇ ದೃಶ್ಯವೊಂದು ಮತ್ತೆ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಹೌದು… ಇಲ್ಲೊಬ್ಬ 89ರ ಉತ್ಸಾಹಿ ವೃದ್ಧೆಯೊಬ್ಬರು ತಮ್ಮ ಹರೆಯದ ಮೊಮ್ಮಗನೊಂದಿಗೆ ಡಾನ್ಸ್ ಮಾಡಿದ್ದಾರೆ. 20 ವರ್ಷಕ್ಕೆ ಜೀವನದ ಬೆಗೆಗಿನ ಹುರುಪೆಲ್ಲ ಕಳೆದುಕೊಳ್ಳುವ ಇಂದಿನ ಯುವಜನತೆಗೆ ಈ ವಿಡಿಯೋ ಸ್ಫೂರ್ತಿ ನೀಡಲಿದೆ.
ವಿಡಿಯೋದಲ್ಲಿ ಏನಿದೆ?
ಅಜ್ಜಿಯೊಬ್ಬರು ತಮ್ಮ ಮೊಮ್ಮಗನೊಂದಿಗೆ ಬಾದ್ಶಾ ಅವರ ‘ಬಾವಾಲಾ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತನ್ನದೇ ಶೈಲಿಯಲ್ಲಿ ಕುಣಿಯುವ ಈ ಅಜ್ಜಿ ಅರೆಕ್ಷಣದಲ್ಲಿ ಎಲ್ಲರ ಮನದಲ್ಲಿಯೂ ಆನಂದದ ಬೀಜ ಬಿತ್ತಿದ್ದಾರೆ.
ಈ ದೃಶ್ಯವನ್ನು ಅಂಕಿತ್ ಜಂಗಿದ್ ಎಂಬುವವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಕೆಲವು ಈ ಅಜ್ಜಿ, ಮೊಮ್ಮಗನ ಪ್ರೀತಿಗೆ ಫಿದಾ ಆದರೆ ಇನ್ನು ಕೆಲವು ಅಜ್ಜಿಯ ಮುಗ್ಧತೆಗೆ ಅಭಿಮಾನಿಯಾಗಿದ್ದಾರೆ.
https://www.instagram.com/reel/CSeMXnfIWNG/?utm_source=ig_web_copy_link