ಫಸ್ಟ್ ಟೈಮ್ ಆಕಾಶದಲ್ಲಿ ಹಾರಾಡಿ ಬೊಚ್ಚುಬಾಯಿ ನಗು ನಕ್ಕಿತು ಅಜ್ಜಿಯಂದಿರ ಟೀಮ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಟ್ಟು 27 ಮಂದಿ ವಯೋವೃದ್ಧ ಮಹಿಳೆಯರು ಏಕಕಾಲದಲ್ಲಿ ತಮ್ಮ ಜೀವನದ ಕನಸು ನನಸಾಗಿಕೊಂಡ ಅಪರೂಪದ ಘಳಿಗೆಗಳಿಗೆ ಕೇರಳದ ಕೊಚ್ಚಿನ್, ಕಣ್ಣೂರು ವಿಮಾನ ನಿಲ್ದಾಣ ಸಾಕ್ಷಿಯಾಗಿದೆ! ಕೊಚ್ಚಿ ಕಾರ್ಪೊರೇಷನ್ ಹಾಗೂ ಹೆಲ್ಪೇಜ್ ಇಂಡಿಯಾ ಸಹಯೋಗದೊಂದಿಗೆ ಈ ಮಹಿಳೆಯರು ಜೀವನದಲ್ಲಿ ಮೊದಲ ಬಾರಿಗೆ ವಿಮಾನ ಏರಿದ್ದಲ್ಲದೆ ಕೊಚ್ಚಿನ್ ನಿಂದ ಕಣ್ಣೂರಿಗೆ ಹಾರಾಟವನ್ನು ನಡೆಸಿದ್ದಾರೆ.

ಕೊಚ್ಚಿ ನಗರಸಭೆಯ ಚುಲ್ಲಿಕ್ಕಲ್ ವಿಭಾಗದ ಓರ್ವ ವೃದ್ಧ ಮಹಿಳೆ ವಿಮಾನದಲ್ಲಿ ಪ್ರಯಾಣಿಸುವ ಬಯಕೆ ಹೇಳಿಕೊಂಡಿದ್ದರು. ಇದಕ್ಕೆ ಅದೇ ಊರಿನ ಇತರರೂ ದನಿಯಾಗಿದ್ದರು. ತಕ್ಷಣವೇ ಇವರನ್ನು ವಿಮಾನ ಏರಿಸುವ ಯೋಜನೆ ರೂಪಿಸಲಾಯಿತಲ್ಲದೆ, ಮೇಯರ್ ಹಾಗೂ ಹೆಲ್ಪೇಜ್ ಇಂಡಿಯಾ ಸಹಕಾರದೊಂದಿಗೆ ಪ್ರಯಾಣದ ಏರ್ಪಾಡು ಕೂಡಾ ಮಾಡಲಾಯಿತು. ಒಟ್ಟು 27 ಮಂದಿಯ ಈ ತಂಡವನ್ನು ಕೊಚ್ಷಿನ್ ನಿಂದ ಕಣ್ಣೂರಿಗೆ ವಿಮಾನದಲ್ಲಿ ಸುರಕ್ಷಿತವಾಗಿ ಕರೆತರಲಾಯಿತು.

ಈ ವಿಮಾನಯಾನದಲ್ಲಿದ್ದವರ ಪೈಕಿ 88 ವರ್ಷದ ಮೋನಿಕಾ ಸ್ಟೇನ್ಲಿ ಅತ್ಯಂತ ಹಿರಿಯರಾಗಿದ್ದು, ಸಾಂಪ್ರದಾಯಿಕ ಕ್ರೈಸ್ತ ಉಡುಗೆ ಚಟ್ಟಯುಮ್ ಮುಂಡುಂ ಧರಿಸಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ವೃದ್ಧ ಮಹಿಳೆಯರು ಶಾಲಾ ಮಕ್ಕಳಂತೆ ಅತ್ಯುತ್ಸಾಹದಿಂದ ಈ ಪ್ರಯಾಣಕ್ಕೆ ಸಿದ್ಧಗೊಂಡು ಎಲ್ಲರಲ್ಲಿಯೂ ಹೊಸ ಉತ್ಸಾಹ ತುಂಬಿದರು.

ಕಣ್ಣೀರಿನ ಪರಸ್ಸಿನಕಡವು ಸ್ನೇಕ್ ಪಾರ್ಕ್, ಮುತ್ತಪ್ಪನ್ ದೇವಸ್ಥಾನ, ಮುಝಪ್ಪಿಲಂಗಡ್ ಕಡಲತೀರಕ್ಕೆ ಭೇಟಿ ನೀಡಿ, ಈ ತಂಡ ವಾಪಸ್ ಕೊಚ್ಚಿಗೆ ರೈಲಿನಲ್ಲಿ ಪ್ರಯಾಣಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!