ಟ್ವಿಟರ್‌ನಲ್ಲಿ ಸರ್ಕಾರಿ ಖಾತೆಗಳಿಗೆ ಗ್ರೇ ಟಿಕ್, ಖಾಸಗಿ ಕಂಪನಿಗಳಿಗೆ ಗೋಲ್ಡ್ ಟಿಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟ್ವಿಟರ್‌ನಲ್ಲಿ ಇನ್ಮುಂದೆ ಎಲ್ಲ ಖಾತೆಗಳಿಗೂ ಬ್ಲೂ ಟಿಕ್ ಸಿಗುವುದಿಲ್ಲ. ಟಿಕ್ ಮಾರ್ಕ್ ನೀತಿಯಲ್ಲಿ ಬದಲಾವಣೆಯಾಗಿದ್ದು, ಸರ್ಕಾರಕ್ಕೆ ಸಂಬಂಧಿಸಿದ ಖಾತೆಗಳಿಗೆ ಗ್ರೇ ಟಿಕ್ ಹಾಗೂ ಖಾಸಗಿ ಕಂಪನಿಗಳ ಖಾತೆಗೆ ಗೋಲ್ಡ್ ಟಿಕ್ ನಿಗದಿಪಡಿಸಲಾಗಿದೆ.

ಇನ್ನು ಉಳಿದ ಪರಿಶೀಲಿಸಿದ ಅಕೌಂಟ್‌ಗಳಿಗೆ ಬ್ಲೂ ಟಿಕ್ ಮುಂದುವರಿಯಲಿದೆ. ಈಗಾಗಲೇ ಟಿಕ್ ಮಾರ್ಕ್ ನೀತಿ ಜಾರಿಯಾಗಿದ್ದು, ಟ್ವಿಟರ್‌ನಲ್ಲಿ ಕೇಂದ್ರ ಸರ್ಕಾರದ ಅಧಿಕೃತ ಖಾತೆ ಗ್ರೇ ಟಿಕ್‌ಗೆ ಬದಲಾಗಿದೆ.

ಈ ಹಿಂದೆ ಬ್ಲೂ ಟಿಕ್‌ನಲ್ಲಿದ್ದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಖಾತೆ ಇದೀಗ ಗ್ರೇ ಟಿಕ್ ಆಗಿದೆ. ನಕಲಿ ಖಾತೆಗಳ ಹಾವಳಿ ತಪ್ಪಿಸಲು ಟಿಕ್ ಮಾರ್ಕ್ ವ್ಯವಸ್ಥೆ ಮಾಡಿದ್ದು, ಟಿಕ್‌ಗಳಿಂದ ಒರಿಜಿನಲ್ ಅಕೌಂಟ್ ಯಾವುದು ಎಂದು ತಿಳಿಯಲು ಸಹಾಯವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!