Friday, July 1, 2022

Latest Posts

ಕೊರೋನಾ ಮೂರನೇ ಅಲೆಯ ಅಬ್ಬರದ ವಿರುದ್ಧ ಸಿದ್ಧತೆ ಆರಂಭಿಸಿದ ‘ಮಹಾ’ ಸರಕಾರ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಎರಡನೇ ಅಲೆಯನ್ನು ಎದುರಿಸುತ್ತಿರುವ ಮಹಾರಾಷ್ಟ್ರ ಇದೀಗ ಮೂರನೇ ಅಲೆಗೂ ಸಿದ್ಧತೆ ಆರಂಭಿಸಿದ್ದು, ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಪ್ರಮಾಣದ ಸೋಂಕು ತಗುಲುವ ಸಾಧ್ಯತೆಯಿರುವುದರಿಂದಾಗಿ ಮಕ್ಕಳ ಕೋವಿಡ್​ ಕೇಂದ್ರ ನಿರ್ಮಾಣಕ್ಕೆ ತಯಾರಿ ನಡೆಸಲಾಗುತ್ತಿದೆ.
ಮೂರನೇ ಅಲೆಯಲ್ಲಿ 18 ವರ್ಷಕ್ಕಿಂತ ಕೆಳಗಿನವರಿಗೆ ಹೆಚ್ಚು ತೊಂದರೆಯಾಗುವ ಸಾಧ್ಯತೆಯಿದೆ. ಚಿಕ್ಕ ವಯಸ್ಸಿನ ಮಕ್ಕಳನ್ನು ನಾವು ಕೋವಿಡ್​ ಕೇಂದ್ರಗಳಲ್ಲಿ ಒಬ್ಬಂಟಿಯಾಗಿ ಬಿಡಲಾಗುವುದಿಲ್ಲ. ಅವರ ತಾಯಿಯೂ ಅವರ ಜತೆ ಇರಬೇಕಾಗುತ್ತದೆ. ಸಾಮಾನ್ಯರಿಗೆ ಬಳಸುವ ವೆಂಟಿಲೇಟರ್​ಗಳನ್ನು ಮಕ್ಕಳಿಗೆ ಬಳಸಲಾಗುವುದಿಲ್ಲ. ಅವರಿಗಾಗಿ ವಿಶೇಷ ವೆಂಟಿಲೇಟರ್​ ಬೇಕಾಗುತ್ತದೆ. ಆ ಎಲ್ಲ ತಯಾರಿಯನ್ನು ನಮ್ಮ ಸರ್ಕಾರ ಮಾಡಿಕೊಳ್ಳಲಾರಂಭಿಸಿದೆ. ಮೂರನೇ ಅಲೆ ಮೇಲ್ವಿಚಾರಣೆಗೆ ಟಾಸ್ಕ್ ಫೋರ್ಸ್ ಅನ್ನು ರಚಿಸಲಾಗುತ್ತಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ತೋಪೆ ತಿಳಿಸಿದ್ದಾರೆ.
ಕೊರೋನಾ ಮೂರನೇ ಅಲೆ ಮೊದಲು ಮತ್ತು ಎರಡನೇ ಅಲೆಗಿಂತ ಹೆಚ್ಚು ಪರಿಣಾಮಕಾರಿಯಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಮೊದಲನೇ ಅಲೆಯಲ್ಲಿ ವಯಸ್ಕರು ಹೆಚ್ಚು ಸಮಸ್ಯೆಗೆ ಸಿಲುಕಿದರು, ಎರಡನೇ ಅಲೆಯಲ್ಲಿ ಮಧ್ಯಮ ವಯಸ್ಕರಿಗೆ ಸಮಸ್ಯೆ ಉಂಟಾಗಿದೆ, ಅದೇ ರೀತಿ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಆಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss