Saturday, July 2, 2022

Latest Posts

ಮುತ್ತತ್ತಿ ಗ್ರಾಮದಲ್ಲಿ ಮಚ್ಚು ಕೊಡುವ ವಿಚಾರ ಜಗಳ: ಕೊಲೆಯಲ್ಲಿ ಅಂತ್ಯ

 ದಿಗಂತ ವರದಿ, ಹಲಗೂರು:

ಮುತ್ತತ್ತಿ ಗ್ರಾಮದ ವಾಸಿ ಸಾಲುಮಲ್ಲನ ಮಗನಾದ ಮುತ್ತುರಾಜ್ (48) ಎಂಬುವವರು ಸಂಬಂಧಿಕರೊಬ್ಬರು 5 ದಿನಗಳ ಇಂದೆ ಮೃತಪಟ್ಟಿದ್ದು. ಅವರ ಅಂತ್ಯಸಂಸ್ಕಾರಕ್ಕೆ ಸೌದೆ ತರುವುದಕ್ಕಾಗಿ ಅದೇ ಗ್ರಾಮದ ಸಂಜೀವಮೂರ್ತಿ ಎಂಬುವರ ಹತ್ತಿರ ಮುತ್ತುರಾಜು ಸೌದೆ ಕತ್ತರಿಸಲು ಮಚ್ಚನ್ನು ತೆಗೆದುಕೊಂಡಿದ್ದರು. ಕೆಲವು ದಿನಗಳು ಕಳೆದರೂ ಮಚ್ಚು ಕೊಡದೆ ಇದ್ದ ಕಾರಣ. ಸಂಜೀವಮೂರ್ತಿ ಮತ್ತು ಮುತ್ತರಾಜು ನಡುವೆ ಮಚ್ಚು ಕೊಡವು ಬಗ್ಗೆ ಜಗಳವಾಗಿ. ಸಂಜೀವಮೂರ್ತಿ ಗುರುವಾರ ಮುತ್ತುರಾಜನ ಹೊಟ್ಟೆಯ ಭಾಗಕೆ ವದ್ದರುತ್ತಾನೆ. ಇದರಿಂದ ಶುಕ್ರವಾರ ಮುತ್ತುರಾಜುಗೆ ಹೊಟ್ಟೆ ನೋವು ಬಂದು ಆಸ್ಪತ್ರೆಗೆ ಸೇರಿಸಲು ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್ ಸರ್ಕಲ್ ಇನ್ಸ್ಪೆಕ್ಟರ್ ಧನರಾಜ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಹಲಗೂರು ಸಬ್ಇನ್ಸ್ಪೆಕ್ಟರ್ ರವಿಕುಮಾರ್ ಆರೋಪಿಯನ್ನು ಬಂಧಿಸಿ ಕೇಸು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss