ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

WORKING WOMEN: ಆಫೀಸಿನಲ್ಲಿ ಈ ರೀತಿ ವರ್ತಿಸಿದರೆ ನಿಮ್ಮ ಬೆನ್ನ ಹಿಂದೆ ಮಾತನಾಡುತ್ತಾರೆ…!

ಈಗೆಲ್ಲಾ ಮನೆಯಲ್ಲೇ ಕೂರೋದಕ್ಕೆ ಹುಡುಗಿಯರು ಇಷ್ಟಪಡೋದಿಲ್ಲ. ಕಷ್ಟಪಟ್ಟು ಓದಿದ ಮೇಲೆ ಕೆಲಸ ಮಾಡದಿದ್ರೆ ಹೇಗೆ? ಗಂಡನಿಗೆ ಸಹಾಯ ಮಾಡಲು, ತನ್ನ ಆಸೆಗಳನ್ನು ಪೂರೈಸಲು, ಮಕ್ಕಳ ಭವಿಷ್ಯಕ್ಕಾಗಿ ಹೆಣ್ಣು ಕೆಲಸ ಮಾಡಬೇಕಿದೆ. ಅದರಲ್ಲೂ ಪ್ಯಾಶನ್‌ಗಾಗಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಆಫೀಸಿನಲ್ಲಿ ನಮ್ಮ ಕೆಲವೊಂದು ಬಿಹೇವಿಯರ್ ಬೇರೆ ಅರ್ಥ ಬರಬಹುದು. ಆಫೀಸಿನಲ್ಲಿ ಸೇಫ್ ಆಗಿರಲು ಈ ರೀತಿ ಮಾಡಿ..

 • ಎಲ್ಲರ ಜೊತೆಯೂ ಫ್ರೆಂಡ್ಲಿ ಟಾಕ್ ಇರಲಿ, ಆದರೆ ಅತಿಯಾಗುವುದು ಬೇಡ.
 • ಆಫೀಸಿನ ಕೊಲೀಗ್ಸ್ ಜೊತೆ ದಿನವೂ ಮನೆಗೆ ಡ್ರಾಪ್ ಕೇಳಬೇಡಿ.
 • ಆಫೀಸಿನಲ್ಲಿ ನಿಮ್ಮ ಪರ್ಸನಲ್ ವಿಷಯ ಬಿಚ್ಚಬೇಡಿ.
 • ಪ್ರೊಫೆಶನಲ್ ಎಥಿಕ್ಸ್‌ನಲ್ಲಿ ಕೆಲಸ ಮಾಡಿ.
 • ಆಫೀಸ್ ಮಹಡಿ ಮೇಲೆ ಒಬ್ಬರೇ ಹೋಗುವುದು, ಕೊಲೀಗ್ಸ್ ಜೊತೆ ಸ್ಮೋಕಿಂಗ್ ಝೋನ್ ಹೋಗದೆ ಇರುವುದು ಸೂಕ್ತ.
 • ಕೊಲೀಗ್ಸ್‌ನನ್ನು ಮನೆಗೆ ಕರೆಯುವುದು, ಮನೆಯವರನ್ನು ಪರಿಚಯ ಮಾಡಿಸದೇ ಇರುವುದು ಒಳ್ಳೆಯದು.
 • ಬ್ಯಾಗ್‌ನಲ್ಲಿ ಚಿಕ್ಕ ಚಾಕು, ಪೆಪ್ಪರ್ ಸ್ಪ್ರೇ ಸದಾ ಇರಲಿ.
 • ನೈಟ್ ಶಿಫ್ಟ್‌ಗಳಿಗೆ ನೋ ಎನ್ನಿ.
 • ಯಾರಾದರೂ ಮಿಸ್‌ಬಿಹೇವ್ ಮಾಡಿದರೆ ಜಾಣ್ಮೆಯಿಂದ ಹೊರಬನ್ನಿ.
 • ಅತಿಯಾದ ಆರ್ಗುಮೆಂಟ್ಸ್, ಪರ್ಸನಲ್ ಮಾತುಗಳು ಬೇಡ. ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟೇ ನೋಡಿಕೊಳ್ಳಿ.
 • ಕೊಲೀಗ್ಸ್ ಜೊತೆ ಕುಳಿತು ಹರಟೆ ಹೊಡೆಯಬೇಡಿ. ಇದು ಮುಂದೊಂದು ದಿನ ನಿಮ್ಮ ಕುತ್ತಿಗೆಗೆ ಬರುತ್ತದೆ.
 • ಸೀನಿಯರ್‌ಗಳ ಬೆನ್ನ ಹಿಂದೆ ಮಾತು ಬೇಡ. ಗೋಡೆಗಳಿಗೂ ಕಿವಿ ಇದೆ ನೆನಪಿರಲಿ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss