ಎಲ್ಲರೂ ಯಾವಾಗಲೂ ದೋಸೆಗೆ ಆಲೂಗಡ್ಡೆ ಪಲ್ಯವನ್ನೇ ಮಾಡುತ್ತಾರೆ. ಆದರೆ ಬಾಳೆಕಾಯಿ ಪಲ್ಯ ಅದಕ್ಕಿಂತ ರುಚಿಯಾಗುತ್ತದೆ. ಮತ್ತೆ ಮಕ್ಕಳು ಈ ಪಲ್ಯ ಇಷ್ಟ ಪಡುತ್ತಾರೆ. ಮಾಡುವುದಕ್ಕೂ ಈಸಿ ತಿನ್ನುವುದಕ್ಕೂ ರುಚಿ. ಇಲ್ಲಿದೆ ರೆಸಿಪಿ…
ಬೇಕಾಗುವ ಸಾಮಗ್ರಿ:
ಬಾಳೆಕಾಯಿ
ಎಣ್ಣೆ
ಸಾಸಿವೆ
ಈರುಳ್ಳಿ
ಅರಿಶಿಣ
ಕೊತ್ತಂಬರಿ ಸೊಪ್ಪು
ಉಪ್ಪು
ಹಸಿ ಮೆಣಸು
ಲಿಂಬು
ಕರಿ ಬೇವು
ಇಂಗು
ಮಾಡುವ ವಿಧಾನ:
- ಮೊದಲಿಗೆ ಬಾಳೆಕಾಯಿಯನ್ನು ಬೇಯಸಿಕೊಳ್ಳಿ.
- ನಂತರ ಅದನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ ಅಥವಾ ಮಾಷ್ ಮಾಡಿಕೊಳ್ಳಿ.
- ಎಣ್ಣೆ, ಹಸಿಮೆಣಸು, ಅರಿಶಿಣ ಸಾಸಿವೆ, ಈರುಳ್ಳಿ, ಇಂಗು, ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಅದನ್ನು ಬಾಳೆಕಾಯಿ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬಿಸಿ ಮಾಡಿ.
- ಅದಕ್ಕೆ ಉಪ್ಪು, ಲಿಂಬು ರಸ ಹಾಕಿದರೆ ಬಾಳೆಕಾಯಿ ಪಲ್ಯ ರೆಡಿ.