ಕೊಡಗಿನ ಮದುವೆಗಳಲ್ಲಿ ಓಪನ್ ಬಾರ್‌ಗೆ ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚುನಾವಣೆ ಮುಗಿಯುವವರೆಗೂ ಕೊಡಗಿನ ಮದುವೆಗಳಲ್ಲಿ ಮದ್ಯ ಬಳಕೆ ಬೇಡ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು.

ಆದರೆ ಕೊಡಗಿನ ಜನರು ಮದ್ಯ ಬಳಕೆಗೆ ಅವಕಾಶ ಕೊಡಿ ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಇದೀಗ ಮದ್ಯ ನಿಷೇಧ ನಿರ್ಬಂಧ ಸಡಿಲಿಕೆ ಮಾಡಿದ್ದು, ಖಾಸಗಿ ಸಮಾರಂಭಗಳಲ್ಲಿ ಮಾತ್ರ ಮದ್ಯ ಬಳಕೆಗೆ ಅವಕಾಶ ನೀಡಲಾಗಿದೆ. ರಾಜಕೀಯ ಪಕ್ಷಗಳ ಕಾರ್ಯಕ್ರಮ ಅಥವಾ ರಾಜಕಾರಣಿಗಳಿಂದ ನಡೆಯುವ ಸಭೆ, ಸಮಾರಂಭದಲ್ಲಿ ಮದ್ಯ ಸರಬರಾಜು ಮಾಡುವಂತಿಲ್ಲ ಎಂದು ಆಯೋಗ ಹೇಳಿದೆ.

ಮದುವೆ, ನಾಮಕರಣ ಮತ್ತುಳಿದ ಖಾಸಗಿ ಸಮಾರಂಭಗಳಲ್ಲಿ ಮದ್ಯ ಸರಬರಾದು ಮಾಡುವಂತಿಲ್ಲ ಎಂದು ಇಲಾಖೆ ಹೇಳಿತ್ತು, ಕೊಡವ, ಗೌಡ ಸಮಾಜದಿಂದ ಈ ಬಗ್ಗೆ ದೂರು ಸಲ್ಲಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!