ಐಸಿಸಿ ಅಧ್ಯಕ್ಷರಾಗಿ ಮರು ಆಯ್ಕೆಯಾದ ಗ್ರೆಗ್ ಬಾರ್ಕ್ಲೇ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಾಲಿ ಅಧ್ಯಕ್ಷರಾಗಿದ್ದ ಗ್ರೆಗ್ ಬಾರ್ಕ್ಲೇ ಅವರು ಎರಡನೇ ಅವಧಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಅಧ್ಯಕ್ಷರಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
ಜಿಮಾಬ್ವೆಯ ತವೆಂಗ್ವಾ ಮುಕುಹ್ಲಾನಿ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದರಿಂದ ನ್ಯೂಜಿಲೆಂಡ್ ಕ್ರಿಕೆಟ್ ಮಾಜಿ ಅಧ್ಯಕ್ಷರು ಆದ ಬಾರ್ಕ್ಲೇ ಅವಿರೋಧವಾಗಿ ಆಯ್ಕೆಯಾದರು. ಅವೆರ ಅಧಿಕಾರವಧಿ 2 ವರ್ಷ ಇರಲಿದೆ. ICC ಮಂಡಳಿಯು ಬಾರ್ಕ್ಲೇಗೆ ಚುಕ್ಕಾಣಿ ಹಿಡಿಯಲು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತ್ತು.
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವುದು ಒಂದು ಗೌರವವಾಗಿದೆ ಮತ್ತು ಬೆಂಬಲಕ್ಕಾಗಿ ನಾನು ನನ್ನ ಸಹ ಐಸಿಸಿ ನಿರ್ದೇಶಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಬಾರ್ಕ್ಲೇ ಸಂತಸ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲೆಂಡ್‌ನ ಅಕ್ಲೆಂಡ್ ಮೂಲದ ಬಾರ್ಕ್ಲೇ ನವೆಂಬರ್ 2020 ರಲ್ಲಿ ICC ಅಧ್ಯಕ್ಷರಾಗಿ ನೇಮಕಗೊಂಡರು. ಅದಕ್ಕೂ ಹಿಂದೆ ನ್ಯೂಜಿಲೆಂಡ್ ಕ್ರಿಕೆಟ್ (NZC) ಅಧ್ಯಕ್ಷರಾಗಿದ್ದರು ಮತ್ತು ICC ಪುರುಷರ ಕ್ರಿಕೆಟ್ ವಿಶ್ವಕಪ್ 2015 ರ ನಿರ್ದೇಶಕರಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!