Tuesday, August 16, 2022

Latest Posts

ಜಿಲ್ಲಾ ಗೃಹ ರಕ್ಷಕ ದಳದಿಂದ ನಡೆಯಿತು ಸ್ವಚ್ಛತಾ ಕಾರ್ಯಕ್ರಮ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಚಿತ್ರದುರ್ಗ:

ಜಿಲ್ಲಾ ಗೃಹರಕ್ಷಕದಳದ ವತಿಯಿಂದ ನಗರದಲ್ಲಿ ಹಲವೆಡೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರಂತೆ ಸಂತೆ ಹೊಂಡ ಸೇರಿದಂತೆ ಹಲವು ಪುಷ್ಕರಣಿಗಳನ್ನು ಸ್ವಚ್ಛಗೊಳಿಸಲಾಯಿತು.
ಪ್ರತಿವಾರ ಗೃಹ ರಕ್ಷಕ ದಳದವರಿಂದ ನಡೆಯುವ ಸ್ವಚ್ಚತಾ ಕಾರ್ಯಕ್ರಮಕ್ಕೆ ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಸಿ.ಕೆ.ಸಂಧ್ಯಾ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ ಗೃಹ ರಕ್ಷಕ ದಳದಲ್ಲಿ 250 ಜನರಿದ್ದು, ಜಿಲ್ಲೆಯಲ್ಲಿ ಬಂದೋಬಸ್ತ್ ಹಾಗೂ ಜನರ ರಕ್ಷಣೆ ಮಾಡುವುದರ ಜೊತೆಗೆ ಸಾಮಾಜಿಕ ಸೇವಾ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
ಸಸಿ ನೆಡುವುದು ಸ್ವಚ್ಚತಾ ಕಾರ್ಯದಲ್ಲಿ ಸ್ವಯಂ ಪ್ರೇರಿತರಾಗಿ ಸಮಾಜ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯವಾಗಿದೆ. ಜಿಲ್ಲೆಯಲ್ಲಿ ಸಮಾಜ ಸೇವೆಗೆ ಗೃಹ ರಕ್ಷಕ ದಳಕ್ಕೆ ಐತಿಹಾಸಿಕವಾಗಿ ಹೆಸರು ಗಳಿಸಿದೆ. ಸ್ವಚ್ಚಗೊಳಿಸುತ್ತಿರುವ ಇದೇ ಸಂತೆ ಹೊಂಡದಲ್ಲಿ ಈ ಹಿಂದೆ ಬಸ್ ಬಿದ್ದಾಗ ಹಲವಾರು ಜನರ ಪ್ರಾಣವನ್ನು ಗೃಹ ರಕ್ಷಕರು ಉಳಿಸಿದ್ದಾರೆ ಎಂದು ಹೇಳಿದರು.
ಇತ್ತೀಚಿಗೆ ಹಲವರಿಗೆ ರಕ್ತದಾನ ಮಾಡಿ ಜೀವ ಉಳಿಸಿದ್ದಾರೆ. ಸಮಾಜಿಕ ಸೇವೆ ಕಾರ್ಯಾ ಚಟುವಟಿಕೆಗಳಲ್ಲಿ ತೊಡಗುವುದರೊಂದಿಗೆ ಪರಿಸರ ಸಂರಕ್ಷಣೆ ಐತಿಹಾಸಿಕ ಸ್ಥಳಗಳ ಸ್ವಚ್ಛತಾ ಕಾರ್ಯ ಪ್ರತಿವಾರ ನಡೆಸಬೇಕು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ಗೃಹರಕ್ಷಕರು ಜನಸ್ನೇಹಿಯಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಾ ಜನತೆಗೆ ಸೇವೆ ಸಲ್ಲಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಭೋದಕರಾದ ಎಚ್.ತಿಪ್ಪೇಸ್ವಾಮಿ, ಸಹಾಯಕ ಭೋದಕರಾದ ನಾಗರಾಜು, ಘಟಕದ ಅಧಿಕಾರಿಗಳಾದ ಸಿ.ಎನ್.ನಾಗರಾಜು, ಪ್ರಹ್ಲಾದ್, ವಿ.ಎಚ್.ತಿಪ್ಪೇಸ್ವಾಮಿ ಹಾಗೂ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss