ಗೃಹಲಕ್ಷ್ಮಿ ಯೋಜನೆ ಹಣ ಅತ್ತೆಗಾ-ಸೊಸೆಗಾ? ಕಡೆಗೂ ಸಿಕ್ತು ಉತ್ತರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಐದು ಗ್ಯಾರೆಂಟಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಈಗ ಸರ್ಕಾರ ಅಧಿಕಾರಕ್ಕೆ ಬಂದು ದಿನಗಳೇ ಕಳೆದಿದ್ರೂ ಇನ್ನೂ ಯಾವುದೇ ಗ್ಯಾರೆಂಟಿ ಜನರ ಕೈಗೆ ಸಿಕ್ಕಿಲ್ಲ, ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಸಿಎಂ ಸಿದ್ದರಾಮಯ್ಯ ಎಲ್ಲಾ ಸಾಧಕ ಬಾಧಕಗಳನ್ನು ಚರ್ಚಿಸಿದ್ದು, ಜೂನ್ 1 ರಿಂದ ಗ್ಯಾರೆಂಟಿ ಜಾರಿಯಾಗುವ ಸಾಧ್ಯತೆ ಇದೆ.

ಸಿದ್ದು ಸರ್ಕಾರಕ್ಕೆ ಗೃಹಲಕ್ಷ್ಮಿ ಗ್ಯಾರೆಂಟಿ ತಲೆನೋವಾಗಿ ಪರಿಣಮಿಸಿತ್ತು. ಮನೆಯೊಡತಿ ಸೊಸೆಯೋ ಅಥವಾ ಅತ್ತೆಯೋ? ಹಣ ಯಾರಿಗೆ ಕೊಡಬೇಕು? ಎರಡು ಸಾವಿರ ರೂಪಾಯಿ ಯಾರ ಖಾತೆಗೆ ಹೋಗಬೇಕು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಅವಿಭಕ್ತ ಕುಟುಂಬಗಳಲ್ಲಿ ಹಣಕ್ಕಾಗಿ ಪೈಪೋಟಿ ನಡೆದಿದ್ದು, ಮನೆಯ ಎಲ್ಲ ಹೆಂಗಸರಿಗೂ ಹಣ ನೀಡಬೇಕು ಎನ್ನುವ ಕೂಗು ಕೇಳಿ ಬಂದಿದೆ. ಆದರೆ ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಮನೆಯ ಯಜಮಾನಿ ಯಾವಾಗಲೂ ಅತ್ತೆಯೇ ಆಗಿರುತ್ತಾಳೆ. ಹಾಗಾಗಿ ಅವರಿಗೇ ಹಣ ಸಲ್ಲುತ್ತದೆ. ಅತ್ತೆ ಸೊಸೆ ಹಂಚಿಕೊಳ್ಳಬಹುದು, ಅದು ಅವರಿಗೆ ಬಿಟ್ಟಿದ್ದು. ಅತ್ತೆ ಹಾಗೂ ಸೊಸೆ ಇಬ್ಬರಿಗೂ ಹಣ ನೀಡುವುದಿಲ್ಲ. ಅತ್ತೆಯೇ ಮನೆಯ ಯಜಮಾನಿ ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!