ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲರ ಖಾತೆಗೆ ಬರುತ್ತೆ, ಆತಂಕ ಬೇಡ : ಡಾ. ಯತೀಂದ್ರ ಸಿದ್ದರಾಮಯ್ಯ

ಹೊಸದಿಗಂತ ವರದಿ, ಮೈಸೂರು:

ಗೃಹಲಕ್ಷ್ಮಿ ಯೋಜನೆ ತಾಂತ್ರಿಕ ಸಮಸ್ಯೆಯಿಂದ ತೊಂದರೆಯಾಗಿದ್ದು, ಸರ್ಕಾರ ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾದ ದಿನದಿಂದಲೂ ಪ್ರತಿಯೊಬ್ಬರ ಖಾತೆಗೆ ಹಣವನ್ನು ಬಿಡುಗಡೆ ಮಾಡುತ್ತದೆ ಇದರ ಬಗ್ಗೆ ಯಾವುದೇ ಆತಂಕವಿಟ್ಟುಕೊಳ್ಳಬಾರದು ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ, ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ವರುಣಾ ಕ್ಷೇತ್ರದ ಎಸ್. ಉತ್ತನಹಳ್ಳಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಈ ಗ್ರಾಮದಲ್ಲಿ ಕಂದಾಯ ಇಲಾಖೆಯ ಸಮಸ್ಯೆಗಳು ಬಹಳ ಇದ್ದು ತಹಸೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳೊಂದಿಗೆ ಸಭೆ ಮಾಡಿ ಸಮಸ್ಯೆಯನ್ನು ಬಗೆಹರಿಸಿಕೊಡುತ್ತೇನೆ. ಗ್ರಂಥಾಲಯ, ಪ್ರಾಥಮಿಕ ಆರೋಗ್ಯಕೇಂದ್ರ, ಸ್ಮಶಾನ ಅಭಿವೃದ್ಧಿ, ರಿಂಗ್ ರಸ್ತೆಯಿಂದ ದೇವಸ್ಥಾನದವರೆಗೆ ಜೋಡಿ ರಸ್ತೆ, ಪಶು ಆಸ್ಪತ್ರೆ ಸ್ಥಳಾಂತರ, ಹೈಸ್ಕೂಲ್, ಕುಂಬಾರಭವನ ಮತ್ತು ವಿಶ್ವಕರ್ಮ ಭವನಕ್ಕೆ ಹಣ ಬಿಡುಗಡೆ ಹಾಗೂ ಪ್ರಸಾದ್ ಯೋಜನೆಯಡಿ ದೇವಸ್ಥಾನವನ್ನು ಸೇರಿಸಿ ಅಭಿವೃದ್ಧಿಪಡಿಸಬೇಕು, ಕನಕಭವನಕ್ಕೆ ಆರ್‌ಟಿಸಿ ಆಗಬೇಕು, ಆಶ್ರಯ ಮನೆಗಳಿಗೆ ಸಕ್ರಮ ಆಗಬೇಕು. ಕುಡಿಯುವ ನೀರಿನ ಬಗ್ಗೆ ಹಲವಾರು ಸಮಸ್ಯೆಗಳನ್ನು ತಿಳಿಸಿದ್ದೀರಿ. ಈ ಎಲ್ಲಾ ಸಮಸ್ಯೆಗಳನ್ನು ಒಂದೇ ಬಾರಿ ಮಾಡಲು ಆಗದಿದ್ದರೂ ಸಹ ಆದ್ಯತೆ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಗಮನಕ್ಕೆ ತಂದು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕಾರ್ಗಳ್ಳಿಯಮ್ಮ ದೇವಸ್ಥಾನ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ತಹಸೀಲ್ದಾರ್ ಜೆ. ಮಹೇಶ್‌ಕುಮಾರ್, ಬಿಇಓ ವಿವೇಕಾನಂದ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ತಾ.ಪಂ. ಮಾಜಿ ಅಧ್ಯಕ್ಷೆ ಮಂಜುಳ ಮಂಜುನಾಥ್, ಸಬ್‌ಇನ್ಸ್ಪೆಕ್ಟರ್ ಚೇತನ್, ಆರ್‌ಐ ಶಂಕರ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್‌ಕುಮಾರ್, ನಾಗರಾಜು, ಮುಖಂಡರಾದ ಬುಲೆಟ್ ರೇವಣ್ಣ, ರಂಗಸ್ವಾಮಿ, ಶಿವಬೀರ, ಬಸಪ್ಪ, ರಾಜು, ಶಿವಣ್ಣ, ಬೀರಪ್ಪ, ಗಿರೀಶ್, ಗ್ರಾಮಸ್ಥರು ಹಾಜರಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!