ಭಾರತದ ಕಾರ್ಪೋರೇಟ್‌ ವಲಯದಲ್ಲಿನ ಉದ್ಯೋಗದಲ್ಲಿ ಹೆಚ್ಚಳ: ಮುಂಚೂಣಿಯಲ್ಲಿದೆ ಐಟಿ ಕ್ಷೇತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ಮಹಾಮಾರಿ ಕೋವಿಡ್‌ ಸಮಯದಲ್ಲಿ ಸಾಮೂಹಿಕ ವಜಾಗೊಳಿಸುವಿಕೆಯ ನಂತರ ಇದೀಗ ಭಾರತದ ಕಾರ್ಪೋರೇಟ್‌ ವಲಯವು ಚೇತರಿಸಿಕೊಳ್ಳುತ್ತಿದ್ದು 2021ರಲ್ಲಿ ಕಡಿತಗೊಳಿಸಿದ್ದಕ್ಕಿಂತ ಹೆಚ್ಚಿನ ಉದ್ಯೋಗಳು ಸೃಷ್ಟಿಯಾಗುತ್ತಿವೆ.

ಜಾಗತಿಕ ಹೂಡಿಕೆ ಬ್ಯಾಂಕ್‌ ಜೆಫರೀಸ್‌ ವರದಿಯ ಪ್ರಕಾರ ವರ್ಷದಿಂದ ವರ್ಷಕ್ಕೆ ಉದ್ಯೋಗ ಸೃಷ್ಟಿಯ ವೇಗವು 8.5 ಶೇಕಡಾದಷ್ಟು ಏರಿಕೆಯಾಗಿದ್ದು ಇದು 2021ರಲ್ಲಿ ಕಡಿತಗೊಂಡಿದ್ದ ಉದ್ಯೋಗಿ ನಷ್ಟವನ್ನು ಸರಿದೂಗಿಸಲಿದೆ ಎನ್ನಲಾಗಿದೆ. ಈ ಕಾರ್ಪೋರೇಟ್‌ ಉದ್ಯೋಗಗಳಲ್ಲಿನ ಹೆಚ್ಚಳವು ಇತರ ಪೂರಕ ಉದ್ದಿಮೆಗಳಾದ ಹೊಟೆಲ್‌ ಗಳು, ವಾಹನ ಉದ್ದಿಮೆಗಳು ಅಲ್ಲದೇ ಜೋಮಾಟೋ, ಸ್ವಿಗ್ಗೀಯಂತಹ ಆಹಾರ ಪೂರೈಕೆದಾರ ಕಂಪನಿಗಳಿಗೂ ವರದಾನವಾಗಿ ಪರಿಣಮಿಸಲಿದೆ.

ಐಟಿ ಕ್ಷೇತ್ರವು ಗರಿಷ್ಠ ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಅಂದಾಜಿಸಲಾಗಿದ್ದು ಉದ್ಯೋಗಿಗಳ ಸಂಖ್ಯೆಯಲ್ಲಿ 22 ಶೇಕಡಾದಷ್ಟು ಏರಿಕೆಯಾಗಿದೆ.

ವರದಿಯ ಪ್ರಕಾರ ಸರ್ಕಾರಿ ಸ್ವಾಮ್ಯದ ಕಂಪನಿಗಳು (ಪಿಎಸ್‌ಯು) ಉದ್ಯೋಗಿಗಳನ್ನು ತ್ಯಜಿಸುವುದನ್ನುಮುಂದುವರೆಸಿದ್ದು ಉದ್ಯೋಗಿಗಳ ಸಂಖ್ಯೆಯಲ್ಲಿ ವರ್ಷಕ್ಕೆ 1.5% ರಷ್ಟು ಇಳಿಕೆಯಾಗಿದೆ.

ಖಾಸಗಿ ವಲಯದ ನೇಮಕವು 11.3ಶೇಕಡಾದಷ್ಟು ಹೆಚ್ಚಿದ್ದು ಇದು ಒಟ್ಟೂ ಪಟ್ಟಿ ಮಾಡಲಾದ 760 ಕಂಪನಿಗಳ ಉದ್ಯೋಗಿಗಳ ಸಂಖ್ಯೆಗೆ 80ಶೇಕಡಾ ಕೊಡುಗೆ ನೀಡಿದೆ. ಅಧ್ಯಯನ ಮಾಡಿದ 760 ಕಂಪನಿಗಳಲ್ಲಿ ಒಟ್ಟು 6 ಮಿಲಿಯನ್‌ ಉದ್ಯೋಗಿಗಳಿದ್ದಾರೆ ಎಂದು ವರದಿ ತಿಳಿಸಿದೆ.

ಉದ್ಯೋಗ ತ್ಯಜಿಸುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಕಂಪನಿಗಳು ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಉದಾರ ವೇತನ ಹೆಚ್ಚಳವನ್ನು ನೀಡುತ್ತಿವೆ. ಸಂಶೋಧನೆಯ ಪ್ರಕಾರ 2022ರಲ್ಲಿ ಉದ್ಯೋಗಿ ವೆಚ್ಚಗಳು ವರ್ಷದಿಂದ ವರ್ಷಕ್ಕೆ 13 ಶೇಕಡಾದಷ್ಟು ಹೆಚ್ಚಾಗಿದೆ. ಇದು ಕಳೆದ ಒಂಬತ್ತು ವರ್ಷಗಳಲ್ಲಿ ಅತಿ ವೇಗದ ಹೆಚ್ಚಳವಾಗಿದೆ. ಹೀಗಾಗಿ ವೆಚ್ಚಗಳನ್ನು ಕಡಿಮೆ ಮಾಡಲು ಕಂಪನಿಗಳು ಹೆಚ್ಚೆಚ್ಚು ಹೊಸಬರನ್ನು ನೇಮಿಸಿಕೊಳ್ಳಲು ಮುಂದಾಗುತ್ತಿವೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!