ಭಾರತದ ಚಿಲ್ಲರೆ ವ್ಯಾಪಾರದಲ್ಲಿ ವೃದ್ಧಿ: RAIನ ಸಮೀಕ್ಷೆ ಏನು ಹೇಳುತ್ತೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕವು ಚಿಲ್ಲರೆ ಉದ್ಯಮಕ್ಕೆ ಧನಾತ್ಮಕವಾಗಿ ಪರಿಣಮಿಸಲಿದ್ದು ಚಿಲ್ಲರೆ ಉದ್ಯಮದಲ್ಲಿ ವೃದ್ಧಿಯಾಗಲಿದೆ. ಈ ಕುರಿತು ಚಿಲ್ಲರೆ ವ್ಯಾಪಾರಿಗಳ ಸಂಘದ (RAI) ಸಮೀಕ್ಷೆಯು 2022ರ ಜುಲೈ ತಿಂಗಳಿನ ಚಿಲ್ಲರೆ ವ್ಯಾಪಾರಗಳು 2019 ಜುಲೈನ ಸಾಂಕ್ರಾಮಿಕ-ಪೂರ್ವ ಮಟ್ಟಗಳಿಗೆ ಹೋಲಿಸಿದರೆ ಮಾರಾಟದಲ್ಲಿ 18% ದಷ್ಟು ವೃದ್ಧಿಸಿದೆ ಎಂದು ತಿಳಿಸಿದೆ.

ವಲಯವಾರು ಬೆಳವಣಿಗೆಯನ್ನು ನೋಡುವುದಾದರೆ ಕ್ರೀಡಾ ಸರಕುಗಳಲ್ಲಿ 32% ದಷ್ಟು ಹೆಚ್ಚಳವಾಗಿದ್ದರೆ ಪೀಠೋಪಕರಣಗಳು ಮತ್ತು ಪಾದರಕ್ಷೆಗಳು ತಲಾ 23% ರಷ್ಟುಬೆಳವಣಿಗೆಯಾಗಿದೆ. ಇನ್ನು ಉಡುಪುಗಳ ಮಾರಟವೂ ಹೆಚ್ಚಿದ್ದು 22% ದಷ್ಟು ಜಿಗಿದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜುಲೈ 2022 ರಲ್ಲಿ ಮಾರಾಟದಲ್ಲಿ 25% ಏರಿಕೆ ಕಂಡು ಬಂದಿದೆ.

ಹೀಗಾಗಿ ಮುಂಬರುವ ಹಬ್ಬಗಳ ಸೀಸನ್‌ ನಲ್ಲಿ ವ್ಯಾಪಾರದಲ್ಲಿ ಉತ್ತಮ ಆವೇಗವನ್ನು ಕಾಣುವ ಬಗ್ಗೆ ಭಾರತದ ಚಿಲ್ಲರೆ ವ್ಯಾಪಾರಿಗಳು ಆಶಾವಾದ ಹೊಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!