spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸಾಂಪ್ರದಾಯಿಕ ಮಾಧ್ಯಮ, ಸೆಲಿಬ್ರಿಟಿಗಳನ್ನು ಮೀರಿಸಿ ಬೆಳೆಯುತ್ತಿದ್ದಾರೆ ‘ಮಾರುಕಟ್ಟೆ ಪ್ರಭಾವಿ’ಗಳು

- Advertisement -Nitte

ಹೊಸದಿಗಂತ ಆನ್ಲೈನ್ ಡೆಸ್ಕ್:

ನಿಮಗೊಂದು ಪ್ರಶ್ನೆ- ಈಗೊಂದು ಎಂಟ್ಹತ್ತು ವರ್ಷಗಳ ಹಿಂದೆ ನಿಮಗೊಂದು ಮೊಬೈಲ್ ಫೋನ್ ಖರೀದಿಸಬೇಕು ಅಂತಿದ್ದರೆ ನಿಮ್ಮ ಆಯ್ಕೆಯನ್ನು ಪ್ರಭಾವಿಸುತ್ತಿದ್ದ, ನಿಮಗೆ ದಾರಿಗಳನ್ನು ತೋರಿಸುತ್ತಿದ್ದ ಸಂಗತಿಗಳು ಯಾವುದಾಗಿದ್ದವು? ಪತ್ರಿಕೆ ಮುಖಪುಟದಲ್ಲಿ ಮಿಂಚಿದ್ದ ಜಾಹೀರಾತೋ, ಟಿವಿಯಲ್ಲಿ ಜನಪ್ರಿಯ ತಾರೆ ಬಂದು ತೋರಿಸಿಹೋದ ಉತ್ಪನ್ನವೋ ಪ್ರಭಾವಿಯಾಗಿರುತ್ತಿದ್ದವು. ಗೊತ್ತಿದ್ದೋ ಗೊತ್ತಿಲ್ಲದೆಯೋ ಅವು ನಮ್ಮ ಆಯ್ಕೆಯನ್ನು ರೂಪಿಸುತ್ತಿದ್ದವು, ಅಲ್ಲವೇ? ಆದರೆ ನೀವು ಇತ್ತೀಚೆಗೆ ತೆಗೆದುಕೊಂಡ ಸ್ಮಾರ್ಟ್ ಫೋನ್ ಆಯ್ಕೆಯನ್ನು ಪ್ರಭಾವಿಸಿರುವುದು ಬಹುತೇಕವಾಗಿ ನೀವು ಯೂಟ್ಯೂಬಿನಲ್ಲಿ ನೋಡಿದ ಯಾವುದೋ ಟೆಕ್ ಗುರುವಿನ ವಿಡಿಯೋವೋ ಅಥವಾ ಇನ್ಸ್ತಾದಲ್ಲಿ ನೀವು ಹಿಂಬಾಲಿಸುತ್ತಿರುವ ವಿಡಿಯೋ ಬ್ಲಾಗರನ ಒಂದು ಪೋಸ್ಟೋ ಆಗಿರುತ್ತದೆ. 

ಆಹಾರ, ಯೋಗ, ಮಾನಸಿಕ ಸಾಂತ್ವನ, ಬಟ್ಟೆ-ಬರೆ ಹೀಗೆ ಎಲ್ಲ ಆಯಾಮಗಳಲ್ಲಿ ನಮ್ಮೆಲ್ಲರನ್ನು ಪ್ರಭಾವಿಸುತ್ತಿರುವ ‘ಮಾರುಕಟ್ಟೆ ಪ್ರಭಾವಿ’ಗಳ ಒಂದು ವರ್ಗ ಹುಟ್ಟಿಕೊಂಡು ಕೆಲ ವರ್ಷಗಳೇ ಆಗಿಹೋದವು. ಅಂತರ್ಜಾಲವು ಹೆಚ್ಚು ಹೆಚ್ಚು ಪ್ರದೇಶಗಳಿಗೆ ವ್ಯಾಪಿಸುತ್ತಿದ್ದಂತೆ ಇಂಥವರ ಪ್ರಭಾವವೂ ಹೆಚ್ಚಾಗುತ್ತಿದೆ. ದೊಡ್ಡ ದೊಡ್ಡ ಬ್ರಾಂಡುಗಳು ಇವರಿಗೇ ಹೆಚ್ಚಿನ ಹಣವನ್ನು ವ್ಯಯಿಸಿ ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಪ್ರಚಾರಗಳಿಗೆ ಒಡ್ಡುತ್ತಿವೆ. 

ಗ್ರೂಪ್ ಎಂ ಎಂಬ ಮಾರುಕಟ್ಟೆ ಅಧ್ಯಯನ ಸಂಸ್ಥೆ ನೀಡಿರುವ ವರದಿಯ ಪ್ರಕಾರ, ಈ ವರ್ಷಾಂತ್ಯದ ವೇಳೆಗೆ ಭಾರತದಲ್ಲಿ ಈ ಮಾರುಕಟ್ಟೆ ಪ್ರಭಾವಿಗಳ ವಹಿವಾಟು ವ್ಯಾಪ್ತಿ ರು 900 ಕೋಟಿಗಳಷ್ಟು. ಇದು ವರ್ಷಕ್ಕೆ ಶೇ. 25ರ ಭಾರಿ ಬೆಳವಣಿಗೆ ಹೊಂದಿ 2025ರ ವೇಳೆಗೆ ರು 2,200 ಕೋಟಿಗಳ ಬೃಹತ್ ಮಾರುಕಟ್ಟೆ ಆಗಲಿದೆ.

ಇವತ್ತಿಗೆ ಉತ್ಪನ್ನಗಳ ಮಾರ್ಕೆಟಿಂಗ್ ಮೊತ್ತದಲ್ಲಿ ಸೆಲಿಬ್ರಿಟಿಗಳು ಶೇ.27ರಷ್ಟನ್ನು ಬಾಚಿಕೊಳ್ಳುತ್ತಿದ್ದರೆ ಶೇ. 73ರಷ್ಟು ಮಾರುಕಟ್ಟೆ ಪ್ರಭಾವಿಗಳೆಂಬ ಹೊಸ ವರ್ಗವೇ ಬಾಚಿಕೊಳ್ಳುತ್ತಿದೆ. ಚಿಕ್ಕ ವಿಡಿಯೋ ಕತೆಗಳು, ಸಣ್ಣ ಸಂವಾದಗಳು, ಹೊಸ ಜಮಾನಾಕ್ಕೆ ಬೇಕಾದ ತ್ವರಿತ ಮತ್ತು ಚುಟುಕು ಮನರಂಜನೆ ಇವೆಲ್ಲವನ್ನೂ ಬಳಸಿಕೊಂಡು ಈ ಮಾರುಕಟ್ಟೆ ಪ್ರಭಾವಿಗಳು ಜನರಿಗೆ ಉತ್ಪನ್ನಗಳ ಕುರಿತಾದ ಮಾಹಿತಿಗಳನ್ನು ದಾಟಿಸುತ್ತಿದ್ದಾರೆ. 

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss